ಕಾಲೇಜಿನ ಎರಡನೇ ವರ್ಷದ ಬಿಇ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಆರ್.ಕೃಷ್ಣ ಸಾರಥಿ, ವರ್ಷಿಣಿ ಹಾಗೂ ಎಸ್.ಶಶಾಂಕ್ ಬಹುಮಾನ ಗಳಿಸಿದ್ದಾರೆ. ಸ್ಮಾರ್ಟ್ ಆಕ್ಸ್ ಎಂಬ ಪ್ರೋಟೋಟೈಪ್ ಮಾಡೆಲ್ನ ಹಾರ್ಡ್ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಸ್ವತಃ ಅಭಿವೃದ್ಧಿಪಡಿಸಿ ಹ್ಯಾಕಥಾನ್‌ನಲ್ಲಿ ಪ್ರದರ್ಶಿಸಿದ್ದಾರೆ. ಇದಕ್ಕೆ 25,000 ರೂ ನಗದು ಬಹುಮಾನ ನೀಡಲಾಗಿದೆ. ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಮದ್ರಾಸ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನದ ವಿಶ್ವವಿದ್ಯಾಲಯಗಳು ಹಾಗೂ ಮಿಜೊರಾಂ, ಮಣಿಪುರ ಸೇರಿದಂತೆ ಹಲವು ರಾಜ್ಯದಿಂದ ಸ್ಪರ್ಧಿಗಳು ಭಾಗವಹಿಸಿದ್ದರು.