ಕಾವೇರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಪ್ರಥಮ

ಪಾಂಡವಪುರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಮಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಂಡ್ಮಿಟನ್ ಕ್ಲಬ್ ತಂಡ.
ಪಾಂಡವಪುರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಮಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಂಡ್ಮಿಟನ್ ಕ್ಲಬ್ ತಂಡ.
Published on
ಪಾಂಡವಪುರ : ಪಾಂಡವಪುರದ ಕ್ರಿಂಡಾಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಲಬ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು.
ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದು, ಸೆಮಿಫೈನಲ್ ಹಂತಕ್ಕೆ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಡ್ಮಿಂಟನ್, ಹೊಂಗಳ್ಳಿ, ಪಾಂಡವಪುರ-ಎ ಮತ್ತು ಪಾಂಡವಪುರ-ಬಿ ತಂಡಗಳು ಪ್ರವೇಶ ಮಾಡಿದ್ದವು. ಫೈನಲ್ ಹಂತಕ್ಕೆ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಮತ್ತು ಪಾಂಡವಾಸ್ ಎ ತಂಡ ಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ 36-24 ಹಾಗೂ 35-22 ನೇರ ಸೆಟ್‌ಗಳಿಂದ ಕೆ.ಆರ್.ಸಾಗರದ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net