ಗ್ರೂಪ್-2ರಲ್ಲಿ 100 ಮೀ ಫ್ರಿಸ್ಟೈಲ್ ವಿಭಾಗದಲ್ಲಿ ಎಸ್.ದೀಕ್ಷಾ(ತೃ), 100 ಮೀ ಬಟರ್ ಪ್ಲೈನಲ್ಲಿ(ದ್ವಿ), 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ(ತೃ) ಹಾಗೂ 50 ಮೀಟರ್ ಬಟರ್ ಪ್ಲೈನಲ್ಲಿ(ತೃ) ಬಹುಮಾನ ಪಡೆದುಕೊಂಡಿದ್ದಾರೆ. ಅಂತೆಯೇ ಸಮೀಕ್ಷಾ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ(ದ್ವಿ), 50 ಮೀಟರ್ ಫ್ರಿಸ್ಟೈಲ್ ವಿಭಾಗದಲ್ಲಿ(ತೃ), ಗ್ರೂಪ್-3ರಲ್ಲಿ ನಿರೀಕ್ಷಾ 50 ಮೀಟರ್ ಪ್ಲೈನಲ್ಲಿ(ದ್ವಿ), 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ(ದ್ವಿ), 50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ(ದ್ವಿ) ಮತ್ತು 50 ಮೀಟರ್ ಫ್ರಿ ಸ್ಟೈಲ್ ವಿಭಾಗದಲ್ಲಿ(ದ್ವಿ), ಅಮೃತಾ 50 ಮೀಟರ್ ಫ್ರಿ ಸ್ಟೈಲ್ ವಿಭಾಗದಲ್ಲಿ(ತೃ) ಬಹುಮಾನ ಗೆದ್ದುಕೊಂಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ಎನ್.ಧನಂಜಯ ಸೇರಿದಂತೆ ಆಡಳಿತ ಮಂಡಳಿ, ಮುಖ್ಯಶಿಕ್ಷಕ, ಶಿಕ್ಷಕರು ಅಭಿನಂದಿಸಿದ್ದಾರೆ.