ಅಪಘಾತಕ್ಕೀಡಾದ ಕಾರಲ್ಲಿ ನಾಡ ಬಂದೂಕು ಪತ್ತೆ

 ವಿದ್ಯುತ್ ಕಂಬಕ್ಕೆ ಗುದ್ದಿರುವ ಕಾರು.
ವಿದ್ಯುತ್ ಕಂಬಕ್ಕೆ ಗುದ್ದಿರುವ ಕಾರು.
Published on
ಹಲಗೂರು: ರಸ್ತೆಯಲ್ಲಿ ಅಪಘಾತಕ್ಕೀಡಾದ ಕಾರೊಂದರಲ್ಲಿ ನಾಡ ಬಂದೂಕು ಪತ್ತೆಯಾಗಿದೆ.
ಸಮೀಪದ ಹಾಡ್ಲಿ-ಮೇಗಳಾಪುರ ಸರ್ಕಲ್ ಬಳಿ ಮಂಗಳವಾರ ಸಂಜೆ ಕಾರು ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಕಂಸಾಗರ ಕಡೆಗೆ ಚಾಲಕ ಕಾರನ್ನು ಚಲಾಯಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕಂಸಾಗರದ ಸ್ಥಳೀಯರಿಗೆ ಕರೆ ಮಾಡಿ ಕಾರನ್ನು ಅಡ್ಡಗಟ್ಟಿಸಿದ್ದಾರೆ. ಈ ವೇಳೆ ಕಾರು ಚಾಲಕ ಕಾರನ್ನು ಹಿಂದಕ್ಕೆ ತಿರುಗಿಸಿಕೊಳ್ಳಲು ಮುಂದಾಗಿದ್ದು, ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದು ಕಾರು ಜಖಂಗೊಂಡಿದ್ದು, ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಹಲಗೂರು ಪಿಎಸ್‌ಐ ಲೋಕೇಶ್ ಅಪಘಾತಕ್ಕೀಡಾದ ಕಾರನ್ನು ಪರಿಶೀಲನೆ ನಡೆಸಲಾಗಿ ಕಾರಿನೊಳಗಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಈಗ ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಲಗೂರು ಪಿಎಸ್‌ಐ ಲೋಕೇಶ್ ತಿಳಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net