ಅದರಂತೆ ಪಿಇಎಸ್ ಕಾಲೇಜಿನಿಂದ ಪಾಲ್ಗೊಂಡಿದ್ದ ಆರ್.ಅನನ್ಯಾ ಮಂಡಿಸಿದ ಕೇರ್‌ಬ್ರಿಡ್ಜ್ ಯೋಜನೆ ಗಮನಸೆಳೆದಿದೆ. ವಿದೇಶದಲ್ಲಿ ವಾಸಿಸುವ ಮಕ್ಕಳಿಗೆ ಭಾರತದಲ್ಲಿರುವ ತಮ್ಮ ವಯೋವೃದ್ಧ ಪಾಲಕರ ಆರೈಕೆಯನ್ನು ನೈಜ-ಸಕಾಲಿಕವಾಗಿ ಹಾಗೂ ವಿಶ್ವಾಸಾರ್ಹವಾಗಿ ನಿರ್ವಹಿಸಲು ರೂಪುಗೊಂಡಿರುವ ಸಮಗ್ರ ಡಿಜಿಟಲ್ ವೇದಿಕೆ ಬಗ್ಗೆ ವಿವರಿಸಿದರು. ಈ ಯೋಜನೆಯಲ್ಲಿ ತರಬೇತಿ ಪಡೆದ ರೋಬೋ ಆರೈಕೆದಾರರ ಸೇವೆ, ಐಒಟಿ ಆಧಾರಿತ ಆರೋಗ್ಯ ಮೇಲ್ವಿಚಾರಣೆ, ದೈನಂದಿನ ಅಗತ್ಯಗಳಲ್ಲಿನ ಸಹಾಯ, ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಪ್ರತಿಕ್ರಿಯೆ ಹಾಗೂ ಸಂಗಾತ್ಯ ಸೇವೆಗಳು ಒದಗಿಸಲ್ಪಡುತ್ತವೆ. ಮೊಬೈಲ್ ಮತ್ತು ವೆಬ್ ಆ್ಯಪ್ ಮೂಲಕ ಮಕ್ಕಳಿಗೆ ರಿಯಲ್ ಟೈಂ ಅಪ್‌ಡೇಟ್, ವಿಡಿಯೋ ಸಂಪರ್ಕ, ತುರ್ತು ಎಚ್ಚರಿಕೆ ನೀಡುತ್ತದೆ. ಇದು ಹಿರಿಯ ನಾಗರಿಕರ ಭದ್ರತೆ ಮತ್ತು ಭಾವನಾತ್ಮಕ ಸುಸ್ಥಿತಿಗೆ ನಿರ್ಣಾಯಕವಾಗುತ್ತದೆ.