ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ ಸಿ-ಆರ್ಮ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿ, ಸಿ-ಆರ್ಮ್ ಯಂತ್ರವು ಎಕ್ಸರೇ ತಂತ್ರಜ್ಞನವಾಗಿದ್ದು, ಮೂಳೆ, ಕೀಲು, ಹೃದಯನಾಳ ಸೇರಿದಂತೆ ಇತರ ಸಮಸ್ಯೆಗಳ ಗುರುತಿಸುವಿಕೆ ಹಾಗೂ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳ ವೇಳೆ ಸ್ಪಷ್ಟತೆಯ ದೃಶ್ಯ ಪಡೆಯಲು ಉತ್ತಮ ಸಾಧನವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಸಿ-ಆರ್ಮ್ ಯಂತ್ರವನ್ನು ಅಳವಡಿಸಲಾಗಿದೆ. ಮೂಳೆ ಜೋಡಣೆ, ಸ್ಟೆಂಟ್ ಅಳವಡಿಕೆಗೆ ಈ ಯಂತ್ರ ಸಹಾಯ ಮಾಡುತ್ತದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ಹೊರೆಯಾಗದಂತೆ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.