ಶಿಕ್ಷಣದ ಮೂಲಕ ಭವಿಷ್ಯ ಕಟ್ಟಿಕೊಳ್ಳಿ

ಪಾಂಡವಪುರ ತಾಲೂಕಿನ ಸಂಕಾತೊಣ್ಣೂರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಉದ್ಯಮಿ ಎಸ್.ಡಿ.ಶಿವಕುಮಾರ್ ಎರಡು ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಎಚ್.ಜೆ.ರಾಮಕೃಷ್ಣ, ದೇವೇಗೌಡ, ಹೇಮಂತ್ ಸೇರಿದಂತೆ ಹಲವರು ಇದ್ದಾರೆ.
ಪಾಂಡವಪುರ ತಾಲೂಕಿನ ಸಂಕಾತೊಣ್ಣೂರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಉದ್ಯಮಿ ಎಸ್.ಡಿ.ಶಿವಕುಮಾರ್ ಎರಡು ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಎಚ್.ಜೆ.ರಾಮಕೃಷ್ಣ, ದೇವೇಗೌಡ, ಹೇಮಂತ್ ಸೇರಿದಂತೆ ಹಲವರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಉದ್ಯಮಿ ಎಸ್.ಡಿ. ಶಿವಕುಮಾರ್ ಸಲಹೆ
ಪಾಂಡವಪುರ: ತಾಲೂಕಿನ ಸುಂಕಾತೊಣ್ಣೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಉದ್ಯಮಿ ಎಸ್.ಡಿ. ಶಿವಕುಮಾರ್ ಎರಡು ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ಉಚಿತವಾಗಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಏನಾದರು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಸಹಕಾರ ನೀಡಲಾಗುವುದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಉತ್ತಮ ಭವಿಷ್ಯಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಒಡೆತನದ ಎಚ್‌ಪಿಸಿಎಲ್ ಹಾಗೂ ಎಲ್‌ಪಿಜಿ ಕಂಪನಿಗಳ ಅಧಿಕಾರಿಗಳೊಂದಿಗೆ ಸುಂಕಾತೊಣ್ಣೂರು ವ್ಯಾಪ್ತಿಯ ಹಳ್ಳಿಗಳಾದ ಹೆಗ್ಗಡಹಳ್ಳಿ, ಕಾಳೇನಹಳ್ಳಿ, ಈರೇಗೌಡನಕೊಪ್ಪಲು, ಮಾಡರಹಳ್ಳಿ ಹಾಗೂ ಅತ್ತಿಗನಹಳ್ಳಿ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಶಿಕ್ಷಕರೊಂದಿಗೆ ಚರ್ಚಿಸಿದ್ದೇವೆ. ಅಲ್ಲಿನ ಶಿಕ್ಷಕರು ಶಾಲೆಗೆ ಅಗತ್ಯ ಇರುವ ಕಂಪ್ಯೂಟರ್, ಪೀಠೋಪಕರಣಗಳು, ಶುದ್ಧ ಕುಡಿಯುವ ನೀರಿನ ಯಂತ್ರಗಳು ಹಲವು ಮೂಲ ಸೌಕರ್ಯಗಳು ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮುಂದಿನ 3 ತಿಂಗಳ ಒಳಗಾಗಿ ಶಾಲೆಗಳಿಗೆ ಕೊಡುಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಗ್ಗಡಹಳ್ಳಿ ಎಚ್.ಜೆ.ರಾಮಕೃಷ್ಣ, ಎಚ್‌ಪಿಸಿಎಲ್ ಹಾಗೂ ಎಲ್‌ಪಿಜಿ ಕಂಪನಿಯ ಮ್ಯಾನೇಜರ್ ಅವಿನಾಶ್, ದೀಪಕ್‌ಕರಣ್, ಗ್ರಾಪಂ ಮಾಜಿ ಅಧ್ಯಕ್ಷರಾದ ಜೆ.ದೇವೇಗೌಡ, ಹೇಮಂತ್‌ಕುಮಾರ್, ಮಾಜಿ ಸದಸ್ಯ ನಾಗರಾಜು, ಪುಟ್ಟಸ್ವಾಮೀಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು ಸೇರಿದಂತೆ ಪಿಡಿಒ, ಪ್ರಾಂಶುಪಾಲ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net