ಶೋಷಿತರು, ದುರ್ಬಲರನ್ನು ಮುಖ್ಯವಾಹಿನಿಗೆ ತನ್ನಿ

ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಲ್ಲಿ ಎಚ್.ಮಂಜುನಾಥ್ ಮಾತನಾಡಿದರು. ಎನ್.ಬಿ.ರಾಮೇಗೌಡ, ಸೋಮಶೇಖರ್, ನಟರಾಜು, ಜವರಯ್ಯ, ಶಂಕರ್, ದೊಡ್ಡವೆಂಕಟಯ್ಯ, ದೇವರಾಜು, ದ್ಯಾವಯ್ಯ, ಹಾಳಪ್ಪ, ಲಿಂಗರಾಜು ಇದ್ದರು.
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಲ್ಲಿ ಎಚ್.ಮಂಜುನಾಥ್ ಮಾತನಾಡಿದರು. ಎನ್.ಬಿ.ರಾಮೇಗೌಡ, ಸೋಮಶೇಖರ್, ನಟರಾಜು, ಜವರಯ್ಯ, ಶಂಕರ್, ದೊಡ್ಡವೆಂಕಟಯ್ಯ, ದೇವರಾಜು, ದ್ಯಾವಯ್ಯ, ಹಾಳಪ್ಪ, ಲಿಂಗರಾಜು ಇದ್ದರು.
Published on
ಪಾಂಡವಪುರ: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಬಡವರು, ಶೋಷಿತರು, ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಅಂಬೇಡ್ಕರ್ ಅವರ ಆಶಯಗಳಿಗೆ ಬೆಲೆ ದೊರೆತಂತಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಹೇಳಿದರು.
ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಯಾರು ಸೌಲಭ್ಯದಿಂದ ವಂಚಿತರಾಗಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹೋರಾಟವನ್ನು ಡಾ.ಬಿ.ಆರ್.ಅಂಬೇಡ್ಕರ್ ಮಾಡಿದರು. ಅದರಲ್ಲಿ ಸಫಲರೂ ಆಗಿದ್ದರು. ಅವರ ಹೋರಾಟ, ತತ್ವ, ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು, ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿರುವವರು ಸಮಾಜದಲ್ಲಿ ಹಿಂದೆ ಉಳಿದಿರುವ ಸೌಲಭ್ಯ ವಂಚಿತರಿಗೆ ಆ ಸೌಲಭ್ಯವನ್ನು ದೊರಕಿಸಿಕೊಟ್ಟು ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿದಾಗ ಮಾತ್ರ ಅವರ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ ಎಂದರು.
ತಾಪಂ ಮಾಜಿ ಸದಸ್ಯ ಎನ್.ಬಿ.ರಾಮೇಗೌಡ, ಸೋಮಶೇಖರ್, ನಟರಾಜು, ಜವರಯ್ಯ, ಶಂಕರ್, ದೊಡ್ಡವೆಂಕಟಯ್ಯ, ದೇವರಾಜು, ದ್ಯಾವಯ್ಯ, ಹಾಳಪ್ಪ, ಲಿಂಗರಾಜು, ಶಶಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net