ಎಚ್.ಕೋಡಿಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆಯಿಂದ 75 ಲಕ್ಷ ರೂ ವೆಚ್ಚದಲ್ಲಿ ತಾಲೂಕಿನ ಎಚ್.ಕೋಡಿಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಂಡ್ಯ- ನಾಗಮಂಗಲ ಮುಖ್ಯ ರಸ್ತೆಯಿಂದ ಎಚ್.ಕೋಡಿಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬಹಳ ವರ್ಷದಿಂದ ಹದಗೆಟ್ಟಿತ್ತು. ಗ್ರಾಮಸ್ಥರ ಕೋರಿಕೆಯ ಮೇರೆಗೆ ಶೀಘ್ರ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು. ಹಾಗೆಯೇ ಎಚ್.ಕೋಡಿಹಳ್ಳಿಯಿಂದ ಸಂಪಹಳ್ಳಿವರೆಗೆ 3 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಅತಿ ಶೀಘ್ರದಲ್ಲಿ ಟೆಂಡರ್ ನಡೆಯಲಿದೆ. ಎಚ್.ಕೋಡಿಹಳ್ಳಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ 25 ಲಕ್ಷ ರೂ ಮಂಜೂರಾಗಲಿದೆ ಎಂದರು.
ಮುಖಂಡರಾದ ಚನ್ನೇಗೌಡ, ಶಿವಣ್ಣ, ನಿವೃತ್ತ ಜಿಲ್ಲಾಧಿಕಾರಿ ಚಂದ್ರೇಗೌಡ, ವೈದ್ಯ ಡಾ.ಚಂದ್ರಶೇಖರ್, ನಂದೀಶ್, ಕೇಶವ, ಪ್ರಶಾಂತ್ ಮತ್ತಿತರರಿದ್ದರು.