ಬೈಕ್‌ನಿಂದ ಕೆಳಗೆ ಬಿದ್ದು ಬಾಲಕ ಮೃತ

ಪ್ರಜ್ವಲ್ (15)
ಪ್ರಜ್ವಲ್ (15)
Published on

ಪ್ರಮುಖ ಮುಖ್ಯಾಂಶಗಳು

  • ಬೆಳಕವಾಡಿ-ಬಿ.ಜಿ.ಪುರ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಗೇಟ್
  • ಬೈಕ್ ತಗುಲಿ ಕೆಳಗೆ ಬಿದ್ದ ಪರಿಣಾಮ
ಮಳವಳ್ಳಿ: ತಾಲೂಕಿನ ಬೆಳಕವಾಡಿ-ಬಿ.ಜಿ.ಪುರ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಗೇಟ್ ಬಳಿ ಶುಕ್ರವಾರ ಕಾರಿಗೆ ಬೈಕ್ ತಗುಲಿ ಕೆಳಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಸವಾರ ಗಾಯಗೊಂಡಿದ್ದಾನೆ.
ಬೆಳಕವಾಡಿ ಗ್ರಾಮದ ಸ್ವಾಮಿ ಅವರ ಪುತ್ರ ಪ್ರಜ್ವಲ್(15) ಮೃತ ಬಾಲಕ. ಇದೇ ಗ್ರಾಮದ ಮಹದೇವಸ್ವಾಮಿ ಅವರ ಪುತ್ರ ಗಗನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಇಬ್ಬರೂ ಸ್ವಗ್ರಾಮದಿಂದ ಬಿ.ಜಿ.ಪುರ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದು, ಎದುರಿನಿಂದ ಬರುವ ಕಾರು ತಿರುವು ಪಡೆಯುತ್ತಿರುವುದನ್ನು ಗಮನಿಸದ ಸವಾರ ನಿಯಂತ್ರಣ ಕಳೆದುಕೊಂಡಿದ್ದಾನೆ. ಬಳಿಕ ಕಾರಿನ ಒಂದು ಭಾಗಕ್ಕೆ ಬೈಕ್ ತಗುಲಿ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರೂ ಸವಾರರು ತೀವ್ರವಾಗಿ ಗಾಯಗೊಂಡರು.
ಕೂಡಲೇ ಸ್ಥಳೀಯರು ಬೆಳಕವಾಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಜ್ವಲ್ ಮೃತಪಟ್ಟ. ಗಾಯಾಳು ಗಗನ್‌ಗೆ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತ ನಡೆದ ಚಿತ್ರಣ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net