ರಕ್ತದಾನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಪ್ರತಿಜ್ಞಾವಿಧಿಯನ್ನು ಕಾರ್ಯಕರ್ತರು ಕೈಗೊಂಡಿರುವುದು.
Published on:
Copied
Follow Us
ಹಲಗೂರು: ಟೀಂ ಮಳವಳ್ಳಿ ವತಿಯಿಂದ ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಆಗಸ್ಟ್ 15ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಕೆ.ಎಂ.ಶಿವಪ್ರಸಾದ್ ಮನವಿ ಮಾಡಿದರು.
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಪೂರ್ವಭಾವಿ ಸಭೆ ಹಾಗೂ ಕಾರ್ಯಕರ್ತರ ಪ್ರತಿಜ್ಞಾವಿಧಿ ವೇಳೆ ಮಾತನಾಡಿ, ರಕ್ತದಾನ ಕೇವಲ ಸೇವೆಯಲ್ಲ. ಇದು ನಮ್ಮೆಲ್ಲರ ಕರ್ತವ್ಯ. ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಜೀವಾಮೃತ ಮಾತ್ರವಲ್ಲದೆ, ನಮ್ಮ ಆರೋಗ್ಯ ಸಮತೋಲನ ಕಾಪಾಡಲು ಮತ್ತು ರಕ್ತ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿ ಎಂದರು.
ಪ್ರಭುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆ ಹೋಗಲಾಡಿಸಲು ನಿರಂತರ ರಕ್ತದಾನ ಶಿಬಿರ ಆಯೋಜನೆ ಮಾಡುವುದು ಈ ಕಾರ್ಯಕ್ರಮ ಉದ್ದೇಶ. ಆದ್ದರಿಂದ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತವಾಗಿ ಶಿಬಿರ ನಡೆಯುತ್ತಿದ್ದು, 2026 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದು, ಯುವಕ, ಯುವತಿಯರು, ಯುವ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಮಹಿಳಾ ಮಂಡಳಿಗಳ ಸದಸ್ಯರು ರಕ್ತದಾನ ಮಾಡುವಂತೆ ಮನವಿ ಮಾಡಿದರು.
ಗ್ರಾಮೀಣ ಪ್ರದೇಶಗಳಿಂದ ರಕ್ತದಾನಿಗಳನ್ನು ಕರೆತರಲು ನಿಟ್ಟೂರು, ಕುಂತೂರು, ದಳವಾಯಿ ಕೋಡಿಹಳ್ಳಿ, ಗಾಣಾಳು, ಹಲಗೂರು, ತೊರೆಕಾಡನಹಳ್ಳಿ ಗ್ರಾಮಗಳಿಂದ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಮುಖರಾದ ಎಂ.ಎನ್.ಮಹೇಶ್ ಕುಮಾರ್, ಕಮಲ್ ನಾಸೀರ್ ಷರೀಫ್, ಎ.ಎಸ್.ದೇವರಾಜು, ಡಾ.ಎ.ಎಸ್.ನಾಗೇಶ್, ಅಭಿಜಿತ್ ಬಸವರಾಜು, ಸುರೇಶ್,ಗಿರಿಶ್, ಎನ್.ಕೆ.ಕುಮಾರ್, ಎಚ್.ಅರ್.ಪದ್ಮನಾಭ್, ಎ.ವಿ.ಟಿ ಕುಮಾರ್, ಸ್ವಾಮಿ, ನಾಗೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.