ಪಿಇಎಸ್‌ನಲ್ಲಿ 175 ಯುನಿಟ್ ರಕ್ತ ಸಂಗ್ರಹ: ಪ್ರತಿಷ್ಠಿತ ಸಂಸ್ಥೆಯ ಮಾದರಿ ಸೇವೆ

ಮಂಡ್ಯ ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ವಿದ್ಯಾರ್ಥಿಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಪ್ರಮಾಣ ಪತ್ರ ವಿತರಿಸಿದರು.
ಮಂಡ್ಯ ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ವಿದ್ಯಾರ್ಥಿಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಪ್ರಮಾಣ ಪತ್ರ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ
  • ದಾನಿಗಳನ್ನು ಅಭಿನಂದಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ
ಮಂಡ್ಯ: ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 175 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಕಾಲೇಜಿನಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಾಲೇಜಿನ ಯೂತ್ ರೆಡ್‌ಕ್ರಾಸ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ರಕ್ತನಿಧಿ ಕೇಂದ್ರ, ಎನ್‌ಎಸ್‌ಎಸ್ ಘಟಕ, ಎನ್‌ಸಿಸಿ ಘಟಕ, ರೋವರ್ಸ್ ಘಟಕದ ಐಕ್ಯೂಎಸಿ ಹಾಗೂ ಕ್ರೀಡಾ ಘಟಕದ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಪಿಇಎಸ್ ಸಂಸ್ಥೆಯಿಂದ ಪ್ರತಿ ವರ್ಷವೂ ರಕ್ತದಾನ ಶಿಬಿರ ಆಯೋಜಿಸುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯ ಬೆಳೆಸಲಾಗುತ್ತಿದೆ. ಅದರಂತೆ ಪ್ರತಿ ಬಾರಿಯೂ ಶಿಬಿರ ಯಶಸ್ವಿಯಾಗುತ್ತದೆ. ಈ ಕಾರಣದಿಂದಲೇ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸುವ ರಕ್ತದಾನ ಶಿಬಿರದಲ್ಲಿ ಪಿಇಎಸ್ ಮುಂದಿದೆ. ಅದರಂತೆ ಈ ಬಾರಿಯೂ ಮಾದರಿ ಸೇವೆಯನ್ನು ಮುಂದುವರೆಸಿದ ಪ್ರಶಂಸೆಗೆ ಸಂಸ್ಥೆ ಪಾತ್ರವಾಯಿತು. ಇನ್ನು ರಕ್ತದಾನ ಮಾಡಿದವರನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿನಂದಿಸಿದರು. ಕಾಲೇಜಿನಲ್ಲಿ ಸಂಗ್ರಹಿಸಿದ ರಕ್ತವನ್ನು ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ, ಉಪ ಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್, ಪ್ರಾಧ್ಯಾಪಕರಾದ ಡಾ.ಶಿವಕುಮಾರ್, ಡೇವಿಡ್ ಪ್ರತಿಭಾಂಜಲಿ, ಜೋಗಿಗೌಡ, ಡಾ.ರಮೇಶ್, ಸಂತೋಷ್, ಡಾ.ಗಿರೀಶ್, ಡಾ.ಪರಮೇಶ್ವರಿ, ಮಿಮ್ಸ್ ಬ್ಲಡ್ ಬ್ಯಾಂಕ್‌ನ ಮಹಮದ್ ರಫಿಕ್ ಇತರರಿದ್ದರು.

ರಕ್ತದಾನ ಎಲ್ಲಕ್ಕಿಂತಲೂ ಶ್ರೇಷ್ಟ
ಎಲ್ಲ ದಾನಕ್ಕಿಂತಲೂ ರಕ್ತದಾನ ಮಾಡುವುದು ಸರ್ವಶ್ರೇಷ್ಟ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ನಾಲ್ಕು ಜನರಿಗೆ ಪ್ರಾಣ ನೀಡಿದಂತಾಗುತ್ತದೆ. ಮುಖ್ಯವಾಗಿ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮವಾಗವುದಿಲ್ಲ. ಬದಲಿಗೆ ರಕ್ತದೊತ್ತಡ ಸೇರಿದಂತೆ ಇತರೆ ಕೆಲ ಆರೋಗ್ಯ ಸಮಸ್ಯೆಗೆ ಪರಿಹಾರವಾಗುತ್ತದೆ. ಮಾತ್ರವಲ್ಲದೆ ದೇಹದಲ್ಲಿನ ರಕ್ತದ ಶುದ್ಧೀಕರಣವಾಗುತ್ತದೆ. ಹಾಗೂ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net