ಮತಾಂತರ ಸಂಬಂಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ಸಲ್ಲಿಸಲು ಮಂಡ್ಯ ನಗರದ ಎಸ್ಪಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಖಾಸಗಿ ಆಸ್ಪತ್ರೆಯಲ್ಲಿ ಆಮಿಷ ನೀಡುತ್ತಿರುವ ಆರೋಪ
ಮಂಡ್ಯ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮಿಷ ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ನಗರದ ಎಸ್ಪಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತಾಂತರದ ಬಗ್ಗೆ ಮಾತನಾಡಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಮತಾಂತರ ಮಾಡಿ ತಮಗೆ ಹಣ ನೀಡುತ್ತೇವೆ. ಜತೆಗೆ ಕೆಲಸವನ್ನು ಕಾಯಂ ಮಾಡುತ್ತೇವೆಂದು ಆಮಿಷ ನೀಡಿರುವ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊಸ ಒಡಂಬಡಿಕೆ ಎನ್ನುವ ಪುಸ್ತಕ ನೀಡಿ, ಹಿಂದು ಧರ್ಮದ ದೇವರಿಗಿಂತ ಯೇಸುವೇ ತುಂಬ ಪವರ್ಫುಲ್. ಆದ್ದರಿಂದ ನಂಬಿ ಮತಾಂತರವಾಗಿ ನಿಮಗೆ ಒಳ್ಳೆಯದು ಆಗುತ್ತದೆ. ಮತ್ತು ನಿಮಗೆ ಹಣವನ್ನು ನೀಡುತ್ತೇವೆಂದು ಬ್ರೈನ್ ವಾಶ್ ಮಾಡುವ ಬಗ್ಗೆ ಅನೇಕ ರೋಗಿಗಳು ಮಾಧ್ಯಮಗಳ ಮುಂದೆಯೇ ಹೇಳಿದ್ದಾರೆ. ಹಾಗಾಗಿ, ಆಮಿಷದ ಮತಾಂತರ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಎಂ.ವಸಂತ್ಕುಮಾರ್, ಪ್ರಸನ್ನಕುಮಾರ್, ನಂದೀಶ್, ಯೋಗೇಶ್, ಸುನೀಲ್, ಹೊಸಹಳ್ಳಿ ಶಿವು, ನಾಗರಾಜು, ಚಂದ್ರ, ಪ್ರಸನ್ನ ಇದ್ದರು.