ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸುವ ಭರತನಾಟ್ಯ: ಶಿಕ್ಷಕ ಭರತ್ ನಾರಾಯಣ ಅಭಿಮತ

ಮಂಡ್ಯ ನಗರದ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.
ಮಂಡ್ಯ ನಗರದ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮೂರು ದಿವಸಗಳ ಭರತನಾಟ್ಯ ಕಾರ್ಯಾಗಾರ
  • ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾ ಶಾಲೆಯಿಂದ ಆಯೋಜನೆ
ಮಂಡ್ಯ: ನಗರದ ಬನ್ನೂರು ರಸ್ತೆಯಲ್ಲಿರುವ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾ ಶಾಲೆಯ ವತಿಯಿಂದ ಮೂರು ದಿವಸಗಳ ಭರತನಾಟ್ಯ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಭರತನಾಟ್ಯ ಶಿಕ್ಷಕ ಹಾಗೂ ಚಿನ್ನದ ಪದಕ ವಿಜೇತ ಭರತ್ ನಾರಾಯಣ್ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಿತು. ಈ ವೇಳೆ ಮಾತನಾಡಿದ ಭರತ್ ನಾರಾಯಣ, ಭರತನಾಟ್ಯ ಮಾಡುವವರಿಗೆ ಇರುವ ಶಕ್ತಿಯು ಬೇರೆ ಯಾರಿಗೂ ಸಹ ಇರುವುದಿಲ್ಲ. ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಗೆ ಸಂಯೋಜನೆಯ ವಿಶೇಷವಾದ ಶಬ್ಧ ಹಾಗೂ ಕೃತಿಗಳಿಂದ ಮಾತ್ರ ಮಕ್ಕಳಲ್ಲಿ ಉತ್ಸಾಹ ಎಂಬುದು ತುಂಬುತ್ತದೆ. ಮಕ್ಕಳು ಗುರುಗಳನ್ನು ಅನುಸರಿಸಿದರೆ ಶಿಸ್ತು ಎಂಬುದು ಇರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಭರತನಾಟ್ಯ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯಸ್ಥೆ ಕೆ.ಎಸ್.ಶೈಲಾ ಇತರರಿದ್ದರು. ಇದೇ ವೇಳೆ ನಂದಿಕೇಶ್ವರ ಭರತನಾಟ್ಯ ಕಲಾಶಾಲೆ ವತಿಯಿಂದ ಭರತ್ ನಾರಾಯಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net