ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

ಮಳವಳ್ಳಿ ತಾಲೂಕಿನ ಕಗ್ಗಲೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಬೆಳಕವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೋಮಲೇಶ್ ಉದ್ಘಾಟಿಸಿದರು. ಎಂ.ಪರಶಿವಮೂರ್ತಿ, ಕೆ.ಬಿ.ಮಹೇಶ್, ವೀರಣ್ಣ, ಕುಮಾರ್, ನಾಡಗೌಡ ಬಸವಣ್ಣ, ಪಟೇಲ್ ಪುಟ್ಟಸ್ವಾಮಿ, ವಿವಿಧ ಶಾಲೆಯ ಮುಖ್ಯಶಿಕ್ಷಕರಾದ ಶಿವಕುಮಾರ್, ಶಿವಾನಂದ ಕುಮಾರ್, ಬಿ.ಎಂ.ಮಹೇಶ್, ಕುಮಾರ್, ಸುಮತಿ, ಇಷ್ರಾತ್ ಜಾನ್, ಶಿವಮಲ್ಲಮ್ಮ ಇದ್ದರು.

Published on
ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಬೆಳಕವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೋಮಲೇಶ್ ಉದ್ಘಾಟಿಸಿದರು.
ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಮಹಾ ಜಯಲಿಂಗು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಹಾಗೂ ಅವರಲ್ಲಿರುವ ವ್ಯಕ್ತಿತ್ವ, ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದರು.
ವಿವಿಧ 11 ಶಾಲೆಗಳಿಂದ 130ಕ್ಕೂ ಹೆಚ್ಚು ಮಕ್ಕಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಪರಶಿವಮೂರ್ತಿ, ಸೊಸೈಟಿ ನಿರ್ದೇಶಕ ಕೆ.ಬಿ.ಮಹೇಶ್, ಗ್ರಾಪಂ ಸದಸ್ಯರಾದ ವೀರಣ್ಣ, ಕುಮಾರ್, ನಾಡಗೌಡ ಬಸವಣ್ಣ, ಪಟೇಲ್ ಪುಟ್ಟಸ್ವಾಮಿ, ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ಶಿವಕುಮಾರ್, ಶಿವಾನಂದ ಕುಮಾರ್, ಬಿ.ಎಂ.ಮಹೇಶ್, ಕುಮಾರ್, ಸುಮತಿ, ಇಷ್ರಾತ್ ಜಾನ್, ಶಿವಮಲ್ಲಮ್ಮ  ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net