ಬೆಸಗರಹಳ್ಳಿ ಬಂದ್ ಯಶಸ್ವಿ

ತಮಿಳುನಾಡಿಗೆ ನೀರು ಹರಿಸದಂತೆ ರೈತಪರ ಸಂಘಟನೆಗಳು ಕರೆದಿದ್ದ ಬಂದ್‌ಗೆ ಮದ್ದೂರು ನಗರದ ನ್ಯಾಯಾಲಯದಲ್ಲಿ ವಕೀಲರು ಕೋರ್ಟ್ ಕಲಾಪಗಳಿಂದ ಹೊರಗುಳಿದು ಬೆಂಬಲ ಸೂಚಿಸಿದರು. ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಸುಮಂತ್, ಖಜಾಂಚಿ ಪ್ರಸನ್ನ, ಹಿರಿಯ ವಕೀಲರಾದ ಮಾದೇಗೌಡ, ಅಪ್ಪಾಜಿಗೌಡ,  ದಯಾನಂದ, ಪ್ರಸನ್ನ, ಮಹೇಶ, ಪ್ರಶಾಂತ್ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.

Published on

ಮದ್ದೂರು: ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಸಿಡಬ್ಲ್ಯುಆರ್‌ಸಿ ಆದೇಶ ಖಂಡಿಸಿ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗುರುವಾರ ಕರೆದಿದ್ದ ಬೆಸಗರಹಳ್ಳಿ ಬಂದ್ ಶಾಂತಿಯುತವಾಗಿ ಸಂಪೂರ್ಣ ಯಶಸ್ವಿಯಾಯಿತು.

ಬೆಸಗರಹಳ್ಳಿಯಲ್ಲಿ-ಮದ್ದೂರು-ಕೊಪ್ಪ ಮಾರ್ಗದ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ಮಾಡಿ, ಯಾವುದೇ ಕಾರಣಕ್ಕೂ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು, ಶಿವಲಿಂಗಯ್ಯ, ಸೊ.ಶಿ.ಪ್ರಕಾಶ್, ವೆಂಕಟೇಶ್, ಯೋಗೇಶ್, ನಾಗರಾಜು, ರಘು ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net