ಐತಿಹಾಸಿಕ ದೇವಸ್ಥಾನಗಳು: ಬೆಳಕವಾಡಿ ಗ್ರಾಮದಲ್ಲಿ ಶತಮಾನಗಳ ಇತಿಹಾಸ ಸಾರುವ ದೇವಸ್ಥಾನಗಳಿವೆ. ಇವುಗಳಲ್ಲಿ ಬೆಳಕವಾಡಿ ಹುಟ್ಟಿಗೆ ಕಾರಣವಾದ ಶ್ರೀ ಕಾಶಿವಿಶ್ವನಾಥ ದೇವಾಲಯ. ಗ್ರಾಮದೇವತೆ ಮಂದಲಕಮ್ಮ ದೇವಸ್ಥಾನವಿದೆ. ಪ್ರತಿ ವರ್ಷ ಮಾರ್ಚ್‌ನಲ್ಲಿ 15 ದಿನಗಳ ಕಾಲ ಮಂದಲಕಮ್ಮನ ಗ್ರಾಮ ದೇವತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇವುಗಳ ಹೊರತಾಗಿ ಗ್ರಾಮದಲ್ಲಿ ಶಂಭುಲಿಂಗೇಸವರ, ಶಿವಲಂಕಾರೇಶ್ವರ, ಸೋಮೇಶ್ವರ, ಕಟ್ಟೆ ಬಸವೇಶ್ವರ, ತುಂಡುಗೇರಿ ಮಾರಮ್ಮ, ವೀರಭದ್ರೇಶ್ವರ, ರಾಮಾಂಜನೇಯ, ಸುಬ್ರಮಣ್ಯಸ್ವಾಮಿ, ಸಿದ್ದಪ್ಪಾಜಿ, ಹುತ್ತದ ಮಸಣಮ್ಮ, ಕಾಳಿಕಾಂಬಾ, ಚಾಮುಂಡೇಶ್ವರಿ ದೇವಸ್ಥಾನಗಳಿವೆ.