ಸಹಕಾರ ಸಂಘಗಳ ಅಭಿವೃದ್ಧಿಗೆ ಒತ್ತು ನೀಡಿ

 .  ಬೆಳಗೊಳ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದ ನವೀಕೃತ ಕಚೇರಿಯನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಬುಧವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಬಿ.ಕೆ. ಪುಟ್ಟಸ್ವಾಮಿ, ಬಿ.ವಿ. ಹರೀಶ್ ನಾಗೇಂದ್ರ ಇತರರು ಇದ್ದರು.
. ಬೆಳಗೊಳ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದ ನವೀಕೃತ ಕಚೇರಿಯನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಬುಧವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಬಿ.ಕೆ. ಪುಟ್ಟಸ್ವಾಮಿ, ಬಿ.ವಿ. ಹರೀಶ್ ನಾಗೇಂದ್ರ ಇತರರು ಇದ್ದರು.
Published on
ಕೆ.ಆರ್. ಸಾಗರ : ಸಹಕಾರ ಸಂಘಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಬೆಳಗೊಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗೊಳ ಸಹಕಾರ ಸಂಘವು ಪ್ರಗತಿ ಸಾಧಿಸಿ ಮಾದರಿ ಸಹಕಾರ ಸಂಘವಾಗಿದೆ. ಈ ಭಾಗದಲ್ಲಿ ಹೆಚ್ಚು ರೈತರು ಸಂಘವನ್ನು ಅವಲಂಬಿಸಿದ್ದು, ಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯ ಕೃಷಿ ಪರಿಕರಗಳನ್ನು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
3 ಲಕ್ಷ ರೂ. ವೆಚ್ಚದಲ್ಲಿ ಸಂಘದ ಒಳಭಾಗದ ಕಟ್ಟಡವನ್ನು ನವೀಕರಿಸಿ ಸಭಾಂಗಣ, ಕಚೇರಿ ಮತ್ತು ಗುಮಾಸ್ತರ ಕೊಠಡಿಗಳಿಗೆ ಹೊಸ ರೂಪ ನೀಡಲಾಗಿದೆ. ನಿರ್ದೇಶಕರು ಹಾಗೂ ಷೇರುದಾರ ರೈತರ
ಸಹಕಾರದಿಂದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಹಕಾರ ಇಲಾಖೆಯೊಂದಿಗೆ ನಾನೂ ಸಂಘದ ಅಭಿವೃದ್ಧಿ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ. ಗಿರೀಶ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರವೀಶ, ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಬಿ.ಕೆ. ಪುಟ್ಟಸ್ವಾಮಿ, ಬಿ.ವಿ. ಹರೀಶ್ ನಾಗೇಂದ್ರ, ಎಂಡಿಸಿಸಿ ಬ್ಯಾಂಕ್
ಮೇಲ್ವಿಚಾರಕ ಕಿರಣ ಕುಮಾರ್, ತಾಪಂ ಮಾಜಿ ಸದಸ್ಯ ಬಿ.ಎಂ.ಸ್ವಾಮೀಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ಪಿಡಿಒ ಕುಳ್ಳೇಗೌಡ , ಗ್ರಾಮದ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net