ಗುರು ಕಲಿಸುವ ವಿದ್ಯೆಯನ್ನು ಕಲಿತು ಆದರ್ಶ ವ್ಯಕ್ತಿಯಾಗಿ

ಹಲಗೂರು ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹುಲ್ಲೇಗಾಲ ಗ್ರಾಮದ ಶಿಕ್ಷಕಿ ಹೇಮಲತಾ, ಕರಿಗೌಡನ ದೊಡ್ಡಿಯ ಶಾಲೆಯ ಶಿಕ್ಷಕಿ ಗೊಲ್ಲರ ಹಳ್ಳಿಯ ರಾಧಾ, ಮತ್ತು ಬಸವನಪುರದ ಶಿಕ್ಷಕಿ ಸುಕನ್ಯಾ ಅವರನ್ನು ಸನ್ಮಾನಿಸಲಾಯಿತು. ಜೈಶಂಕರ, ಅನುರಾಧಾ, ರವಿ, ಸೋಮಣ್ಣ, ಶ್ರೀನಿವಾಸ್, ಮಹಾಂತೇಶ್, ಪುಟ್ಟೇಗೌಡ, ಎಚ್.ಎಂ.ಮಹೇಶ್, ರಾಕೇಶ್ ಇತರರಿದ್ದರು.

Published on
ಹಲಗೂರು: ನಿಮಗೆ ವಿದ್ಯೆ ಕಲಿಸುವ ಗುರುಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ವಿದ್ಯಾರ್ಥಿಗಳು ನೀಡಲೇಬೇಕು. ಗುರು ಕಲಿಸುವ ವಿದ್ಯೆಯನ್ನು ಕಲಿತು ಸಮಾಜಕ್ಕೆ ಮತ್ತು ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿಯಾಗಿಬೇಕು ಎಂದು ಬಸವನಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಕನ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಲಗೂರು ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ನೀವು ನಿಮಗೆ ವಿದ್ಯೆ ಕಲಿಸಿದ ಗುರುಗಳನ್ನು ನಂಬಿ, ಗೌರವಿಸಿ. ಅವರಲ್ಲಿ ದೈವತ್ವವನ್ನು ಕಾಣಿರಿ. ನಿಮ್ಮ ಭವಿಷ್ಯ ಉಜ್ವಲವಾಗಬೇಕು ಎಂದರೆ ನಿಮ್ಮನ್ನು ನೀವು ಗುರುವಿಗೆ ಸಮರ್ಪಿಸಿಕೊಳ್ಳಬೇಕು. ಒಬ್ಬ ವಿದ್ಯಾರ್ಥಿಗೆ ಮುಂದೆ ಗುರಿ ಹಿಂದೆ ಗುರು ಇದ್ದರೆ ಖಂಡಿತ ಅವನೊಬ್ಬ ಸಾಧಕನಾಗುತ್ತಾನೆ ಎಂದು ಕಿವಿಮಾತು ಹೇಳಿದರು.
ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಮ್ಮ ಏಳಿಗೆಗಾಗಿ. ಖಾಸಗಿ ಶಾಲೆಗಳ ಆಕರ್ಷಕ ಜಾಹೀರಾತಿಗೆ ಮಾರು ಹೋಗದಿರಿ. ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವುದು ಸರ್ಕಾರಿ ಶಾಲೆಗಳು. ಈ ಬಗ್ಗೆ ಹೆಮ್ಮೆ ನಮಗಿದೆ. ಪ್ರತಿಯೊಬ್ಬರೂ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿ ಎಂದು ಕರೆ ನೀಡಿದರು.
ಹಲಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜ್ಯೆಶಂಕರ, ಉಪ ಪ್ರಾಂಶುಪಾಲೆ ಅನುರಾಧಾ, ಉಪನ್ಯಾಸಕರಾದ ರವಿ, ಸೋಮಣ್ಣ, ಶ್ರೀನಿವಾಸ್, ಮಹಾಂತೇಶ್, ಪುಟ್ಟೇಗೌಡ, ಎಚ್.ಎಂ.ಮಹೇಶ್, ರಾಕೇಶ್, ಪುಟ್ಟಸ್ವಾಮಿ, ಶಾಲೆಯ ಶಿಕ್ಷಕವೃಂದ ಮತ್ತು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net