ಬಿ.ಸಿ.ಈರೇಗೌಡ, ಬಿ.ಕೆ.ಸೋಮಶೇಖರ್ ಅವಿರೋಧ ಆಯ್ಕೆ

ಬೆಳತೂರು ಗ್ರಾಮದ ಡೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಿ.ಸಿ.ಈರೇಗೌಡ, ಬಿ.ಕೆ.ಸೋಮಶೇಖರ್ ಅವರನ್ನು ಸದಸ್ಯರು ಅಭಿನಂದಿಸಿದರು.
ಬೆಳತೂರು ಗ್ರಾಮದ ಡೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಿ.ಸಿ.ಈರೇಗೌಡ, ಬಿ.ಕೆ.ಸೋಮಶೇಖರ್ ಅವರನ್ನು ಸದಸ್ಯರು ಅಭಿನಂದಿಸಿದರು.
Published on
ಹಲಗೂರು: ಸಮೀಪದ ಬೆಳತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಸಿ.ಈರೇಗೌಡ ಮತ್ತು ಉಪಾಧ್ಯಕ್ಷರಾಗಿ ಬಿ.ಕೆ.ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ 11 ನಿರ್ದೇಶಕ ಬಲದ ಆಡಳಿತ ಮಂಡಳಿಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಈರೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಸೋಮಶೇಖರ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಜಿ.ವಿ.ಮುತ್ತುರಾಜು ಇಬ್ಬರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಬಿ.ಸಿ.ಈರೇಗೌಡ ಮಾತನಾಡಿ, ನನ್ನನ್ನು ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸರ್ವ ಸದಸ್ಯರ ಏಳಿಗೆಗೆ ಶ್ರಮ ವಹಿಸುವೆ ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ಬಿ.ಕೆ.ಸೋಮಶೇಖರ್ ಮಾತನಾಡಿ, ಸಂಘದ ಸದಸ್ಯರು ಪ್ರತಿದಿನವೂ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ.ವಿ.ದಿಲೀಪ, ಕೆ.ನಾಗರಾಜು, ಬಿ.ಕೆ.ರಮೇಶ್, ಕೆ.ಬಸವರಾಜು, ರತ್ನಮ್ಮ, ಸಿ.ಶ್ರುತಿ, ಶಿವಮ್ಮ, ನಾಗರಾಜು ಅರಸು, ಬಿ.ಸಿ.ರಾಜೇಶ ಮುಖ್ಯ ಕಾರ್ಯ ನಿರ್ವಾಹಕಿ ಬಿ.ಡಿ.ಪವಿತ್ರಾ, ಹಾಲು ಪರೀಕ್ಷಕಿ ಲಕ್ಷ್ಮೀ, ಮುಖಂಡರಾದ ಬಿ.ಕೆ.ಪ್ರಕಾಶ್, ನಾಗೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net