ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡಿದ್ದ ಬಿ.ಸಿ. ರಾಯ್

ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈದರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಾರಾದ ಡಾ.ವೀರಭದ್ರಪ್ಪ, ಡಾ. ಸಂಜಯ್, ಡಾ.ಲಕ್ಷ್ಮೀ, ಡಾ.ದಯಾನಂದ, ಡಾ.ಅರುಣ್ ಕುಮಾರ್, ಡಾ. ರಮ್ಯ ಅವರನ್ನು ಸನ್ಮಾನಿಸಲಾಯಿತು. ಘನಶ್ಯಾಮ್ ದಾಸ್, ಆರ್.ಜಿ.ಮಹದೇವಸ್ವಾಮಿ, ಟಿ.ಎಸ್.ಪ್ರಕಾಶ್, ಶ್ವೇತಾ ಗೌಡ  ಇದ್ದರು.

Published on
ಮಳವಳ್ಳಿ:ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರೂ ಸಮಾಜ ಸೇವೆಯ ಜತೆಗೆ ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡು ಜನರ ಆರೋಗ್ಯ ಸೇವೆಯ ಮೂಲಕ ಮಾದರಿಯಾದವರು ಡಾ.ಬಿ.ಸಿ. ರಾಯ್ ಎಂದು ಪಟ್ಟಣದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಬಣ್ಣಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾಗಿದ್ದ ಡಾ.ಬಿ.ಸಿ.ರಾಯ್ ಅವರು ಪಶ್ಚಿಮ ಬಂಗಾಳ ರಾಜ್ಯದ ರಚನೆಯ ನೇತಾರರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರತಿ ದಿನ ತಮ್ಮ ಬಿಡುವಿನ ಸಮಯದಲ್ಲಿ ರೋಗಿಗಳಿಗೆ ಆರೋಗ್ಯ ಸಲಹೆ, ಚಿಕಿತ್ಸೆ ನೀಡುತ್ತಿದ್ದರು. ರಾಯ್ ಅವರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕೆಂದರು.
ರೋಟರಿ ಶಾಲೆ ಅಧ್ಯಕ್ಷ ಘನಶ್ಯಾಮ್ ದಾಸ್ ಮಾತನಾಡಿ, ಪ್ರಾಣ ಉಳಿಸುವ ವೈದ್ಯರು ಜೀವ ನೀಡಿದ ದೇವರಷ್ಟೇ ಸಮಾನರಾಗಿದ್ದು, ವೈದ್ಯರ ಸೇವೆಯ ಮಹತ್ವ ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ವೈದ್ಯರ ಬಗ್ಗೆ ಗೌರವ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಆರ್. ಜಿ. ಮಹದೇವಸ್ವಾಮಿ ಮಾತನಾಡಿದರು. ವೈದ್ಯಾರಾದ ಡಾ.ವೀರಭದ್ರಪ್ಪ, ಡಾ.ಸಂಜಯ್, ಡಾ. ಲಕ್ಷ್ಮೀ, ಡಾ.ದಯಾನಂದ, ಡಾ.ಅರುಣ್ ಕುಮಾರ್, ಡಾ.ರಮ್ಯಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಶಾಲಾ ಕಾರ್ಯದರ್ಶಿ ಟಿ.ಎಸ್.ಪ್ರಕಾಶ್ , ಪ್ರಾಂಶುಪಾಲೆ ಶ್ವೇತಾ ಎಸ್.ಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net