ಮೇಲುಕೋಟೆಯಲ್ಲಿ ಚಿರತೆ ದಾಳಿಗೆ ಬಸವ ಬಲಿ

ಮೇಲುಕೋಟೆ ಮನೆ ಹಿಂಭಾಗ ಬಸವನ ಕತ್ತು ಹಿಡಿದಿರುವ ಚಿರತೆ.
ಮೇಲುಕೋಟೆ ಮನೆ ಹಿಂಭಾಗ ಬಸವನ ಕತ್ತು ಹಿಡಿದಿರುವ ಚಿರತೆ.
Published on
ಮೇಲುಕೋಟೆ: ಮೇಲುಕೋಟೆಯಲ್ಲಿ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಬಿಟ್ಟಿದ್ದ ಗೂಳಿಯನ್ನು ಚಿರತೆ ಕೊಂದು ಹಾಕಿದೆ.
ಬೇಕರಿ ರಾಜು ಮನೆ ಹಿಂಭಾಗ ಇತ್ತೀಚೆಗೆ ರಾತ್ರಿ 10 ಗಂಟೆ ಸಮಯದಲ್ಲಿ ಚಿರತೆ ಬಸವನ ಕತ್ತು ಹಿಡಿದಿದ್ದು, ಚಿರತೆಯಿಂದ ತಪ್ಪಿಸಿಕೊಳ್ಳಲು ಬಸವ ಒದ್ದಾಡಿದೆ. ಈ ದೃಶ್ಯವನ್ನು ದೇವಾಲಯದ ನೌಕರ ಶ್ರೀಪಾದ ಸೆರೆ ಹಿಡಿದಿದ್ದಾರೆ. ಚಿರತೆಯಿಂದ ಬಸವನನ್ನು ಬಿಡಿಸಲು ನೀರು ಎರಚಿದರೂ ಬಿಡದೆ ಕೊಂದು ಹಾಕಿದೆ. ಬಳಿಕ ಕಳೇಬರವನ್ನು ಹೊತ್ತೊಯ್ದು ತಿಂದು ಹಾಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net