ವಕೀಲರ ಸಂಘದ ವತಿಯಿಂದ ಮದ್ದೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶಿವಣ್ಣ, ಎಂ.ಎಂ.ಪುಟ್ಟರಾಜು, ಎಂ.ಜೆ.ಸುಮಂತ್, ಸುವರ್ಣ, ಪ್ರಸನ್ನಕುಮಾರ್ ಇದ್ದರು.
ಕಾವೇರಿ ನದಿ ನೀರು ಹೋರಾಟ ಸಮಿತಿಗೆ ಬೆಂಬಲ ಸೂಚಿಸಿ ವಕೀಲರ ಸಂಘದ ಪದಾಧಿಕಾರಿಗಳು ಶನಿವಾರ ಬೆಂಬಲ ಸೂಚಿಸಿದರು.
ತಾಲೂಕು ಕಚೇರಿಗೆ ತೆರಳಿದ ಪದಾಧಿಕಾರಿಗಳು ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ರಾಜ್ಯ ತಮಿಳುನಾಡು ಮುಖ್ಯಮಂತ್ರಿಯನ್ನು ಓಲೈಸಲು ಮುಂದಾಗಬಾರದು. ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಬಾರದು ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಎಂ.ಎಂ.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಜಂಟಿ ಕಾರ್ಯದಶಿ ಬಿ.ಸುವರ್ಣ, ಖಜಾಂಚಿ ಎನ್.ಎಸ್.ಪ್ರಸನ್ನಕುಮಾರ್, ಕ್ರೀಡಾ ಕಾರ್ಯದರ್ಶಿ ಯಶವಂತ್, ವಕೀಲರಾದ ಕೋಮಲಾ, ಯಶೋದಮ್ಮ, ಸಿದ್ದಪ್ಪಾಜಿ ಇದ್ದರು.