ಭಾರತೀಪು ಗ್ರಾಮದಲ್ಲಿ ಬಾಬಯ್ಯನ ಹಬ್ಬ

ಕಿಕ್ಕೇರಿ ಸಮೀಪದ ಭಾರತೀಪುರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮೊಹರಂ(ಬಾಬಯ್ಯ) ಹಬ್ಬದಲ್ಲಿ ಮುಸ್ಲಿಮರು ಹಸೆನ್ ಹಾಗೂ ಹುಸೇನ್ ಪಂಜಗಳಿಗೆ ಪೂಜಿಸಿದರು. ಅಮ್ಜದ್ ಬೇಗ್, ಮುನ್ನಾ ಬೇಗ್, ಕೃಷ್ಣೇಗೌಡ, ಬಲರಾಂ ಇತರರಿದ್ದರು.
ಕಿಕ್ಕೇರಿ ಸಮೀಪದ ಭಾರತೀಪುರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮೊಹರಂ(ಬಾಬಯ್ಯ) ಹಬ್ಬದಲ್ಲಿ ಮುಸ್ಲಿಮರು ಹಸೆನ್ ಹಾಗೂ ಹುಸೇನ್ ಪಂಜಗಳಿಗೆ ಪೂಜಿಸಿದರು. ಅಮ್ಜದ್ ಬೇಗ್, ಮುನ್ನಾ ಬೇಗ್, ಕೃಷ್ಣೇಗೌಡ, ಬಲರಾಂ ಇತರರಿದ್ದರು.
Published on
ಕಿಕ್ಕೇರಿ: ತ್ಯಾಗ, ಬಲಿದಾನದ ಸಂಕೇತದ ಮೊಹರಂ ಹಬ್ಬ ಆಚರಣೆಯ ಕೊನೆಯ ದಿನವನ್ನು ಬಾಬಯ್ಯನ ಹಬ್ಬವನ್ನಾಗಿ ಮುಸ್ಲಿಮರು ಸಡಗರದಿಂದ ಸಮೀಪದ ಭಾರತೀಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಚರಿಸಿದರು.
ಹಬ್ಬ ಆರಂಭದ 4ನೇ ದಿನದಂದು ಇಲ್ಲಿನ ಬೆಟ್ಟದಲ್ಲಿನ ಹಜರತ್ ಸಯ್ಯದ್ ಬಾಬಾ ಫಕ್ರುದ್ದೀನ್ ಗುಡಿಗೆ ತೆರಳಿದರು. ಇಲ್ಲಿನ ಪವಿತ್ರ ಬಾವಿಯಲ್ಲಿ ಹಸೆನ್ ಹಾಗೂ ಹುಸೆನ್ ಹಸ್ತ(ಪಂಜ)ವನ್ನು ಪುಣ್ಯ ಸ್ನಾನದೊಂದಿಗೆ ಶುದ್ಧೀಕರಣ ಮಾಡಲಾಯಿತು. ಪಂಜವನ್ನು ಶ್ರದ್ಧಾಭಕ್ತಿಯಿಂದ ತಂದು ಗ್ರಾಮದ ರಂಗದ ಬೀದಿಯಲ್ಲಿನ ಆಶುಖಾನ ಗುಡಿಯಲ್ಲಿಟ್ಟು ಪೂಜಿಸಿದರು. ತದನಂತರ ದರ್ಗಾದ ಹಜರತ್ ಸಯ್ಯದ್ ಬಾಬಾ ಡೋಂಗ್ರಿ ಮುಷಾಯಖ್ ಸಮಾಧಿಗೆ ತೆರಳಿ ನಮಿಸಿದರು.
ಭಾರತೀಪುರ, ಗಂಗನಹಳ್ಳಿ ಗ್ರಾಮಗಳಲ್ಲಿ ಪುಷ್ಪಾಲಂಕಾರದೊಂದಿಗೆ ಪಂಜಗಳನ್ನು ಮೆರವಣಿಗೆ ಮಾಡಲಾಯಿತು. ಚಿಕ್ಕಮಗಳೂರು, ಹಾಸನ, ತರೀಕೆರೆ, ಅರಸೀಕೆರೆ ಮತ್ತಿತರ ಕಡೆಯಿಂದ ಆಗಮಿಸಿದ್ದ ಹಲವರು ದೇವರಲ್ಲಿ ತಮ್ಮ ಇಷ್ಟಾರ್ಥ ಬೇಡಿಕೆ ಪೂರೈಕೆ ಪ್ರಾರ್ಥಿಸಿದರು.
ಕೊಂಡದ ಸುತ್ತ ಪುಷ್ಪಾಲಂಕೃತ ದೇವರ ಪಂಜಗಳನ್ನು ಪ್ರದಕ್ಷಿಣೆ ಹಾಕಿಸಿದರು. ಜಾತಿಪಂಥ ಮರೆತು ಎಲ್ಲ ಸಮುದಾಯದವರು ತಮಟೆ ವಾದ್ಯದೊಂದಿಗೆ ಕೊಂಡದ ಸುತ್ತ ಸಂತಸದಿಂದ ಕುಣಿದರು.
ಮುಖಂಡರಾದ ಅಮ್ಜದ್ ಬೇಗ್, ಮುನ್ನಾ ಬೇಗ್, ಕೃಷ್ಣೇಗೌಡ, ಬಲರಾಂ, ತಮ್ಮೇಗೌಡ, ಸತೀಶ್, ಶ್ರೀಧರ್, ತಿಮ್ಮೇಗೌಡ, ಯಾಸೀನ್, ಉಸ್ಮಾನ್, ಅನ್ಸರ್, ಆರೀಪ್, ಅಮೀರ್ ಬೇಗ್, ಅನ್ವರ್ ಬೇಗ್, ದಸ್ತಗೀರ ಬೇಗ್, ಮಾಸ್ ಬೇಗ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net