ಉಪ್ಪಿನಕೆರೆ ಕೃಷಿ ಪತ್ತಿನ ಸಂಘಕ್ಕೆ ಡಿ.ವರದರಾಜು ಅಧ್ಯಕ್ಷ

ಮದ್ದೂರು: ತಾಲೂಕಿನ ಉಪ್ಪಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಿ.ವರದರಾಜು ಅವಿರೋಧವಾಗಿ ಆಯ್ಕೆಯಾದರು. ಪುಟ್ಟಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಿ.ವರದರಾಜು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಎಂ.ಆರ್.ಮಂಜು ಅವಿರೋಧ ಆಯ್ಕೆ ಪ್ರಕಟಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಡಿ.ವರದರಾಜು, ಸಹಕಾರ ಸಂಘದ ನಿರ್ದೇಶಕರು ಹಾಗೂ ಸ್ಥಳೀಯರು ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದರು. ಸಹಕಾರ ಸಂಘದಲ್ಲಿ ಸಿಗುವ ಹಲವು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಜತೆಗೆ ರೈತರಿಗೆ ಸಕಾಲದಲ್ಲಿ ಕ್ರಿಮಿನಾಶಕ, ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದರು. ಸಂಘದ ಉಪಾಧ್ಯಕ್ಷ ಬಸವರಾಜು, ನಿರ್ದೇಶಕರಾದ ಡಿ.ನಾಗರಾಜು, ಅನುಜಾಕ್ಷಿ, ಲೀಲಾ, ಯು.ಎ.ಪ್ರಸನ್ನ, ಯು.ಎಸ್.ಶಿವರಾಮ, ಶಿವಲಿಂಗಯ್ಯ, ಸಿ.ಅರವಿಂದ್, ಮುಖಂಡರಾದ ಎಂ.ಶಿವಲಿಂಗೇಗೌಡ, ಯು.ಸಿ.ಶಿವರಾಮೇಗೌಡ, ಎಲ್.ರಾಮಲಿಂಗಯ್ಯ, ರವಿಗೌಡ, ಶಶಿಧರ್, ರಘುನಂದನ್, ಪ್ರಜ್ವಲ್, ಪ್ರಶಾಂತ್, ನೀಲಕಂಠೇಗೌಡ ಇತರರಿದ್ದರು
ayke
ಉಪ್ಪಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಿ.ವರದರಾಜು ಅವಿರೋಧವಾಗಿ ಆಯ್ಕೆಯಾದರು. ಬಸವರಾಜು, ಡಿ.ನಾಗರಾಜು, ಅನುಜಾಕ್ಷಿ, ಲೀಲಾ, ಯು.ಎ.ಪ್ರಸನ್ನ, ಶಿವರಾಮ, ಶಿವಲಿಂಗಯ್ಯ, ಸಿ.ಅರವಿಂದ್ ಇದ್ದರು.dairy
Published on: 

ayke