ಡ್ಯಾಫೋಡಿಲ್ಸ್ ಶಾಲೆಯ ಕಾರ್ಯದರ್ಶಿ ಸುಜಾತಾಕೃಷ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪರಿಣಾಮ ತಾಪಮಾನ ವೃದ್ಧಿ ಮತ್ತು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಿ. ಮನೆಗಳಲ್ಲಿ ಮತ್ತು ನಾಗರಿಕರಿಗೆ ಜಾಗೃತಿ ಮೂಡಿಸಿ. ಈ ವರ್ಷದ ಘೋಷವಾಕ್ಯ ಪ್ರಕೃತಿಯಿಂದ ಪ್ರೇರಿತರಾಗಿ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬುದಾಗಿದೆ. ಪ್ರಕೃತಿಯಿಂದ ತಾಳ್ಮೆ, ಸಹಬಾಳ್ವೆ ಕಲಿಯೋಣ ಹಾಗೂ ಉತ್ತಮ ಹವಾಮಾನಕ್ಕಾಗಿ ಮನೆಗೊಂದು ಮರ ನೆಟ್ಟು ಬೆಳೆಸಿ, ಪೋಷಿಸಿ, ನಾಳೆಗಾಗಿ ಇಂದೇ ಪರಿಸರವನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.