ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸಮಿತಿಯಿಂದ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ನಗದು ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಹಬಲಶರ್ಮ, ಕೆ.ಬಿ. ವೆಂಕಟೇಶ್, ಕೆ.ಎಸ್. ಪರಮೇಶ್ವರಯ್ಯ, ಕೆ.ಎಸ್. ಅನಂತಸ್ವಾಮಿ ಇದ್ದರು.
ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸಮಿತಿಯಿಂದ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ನಗದು ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಹಬಲಶರ್ಮ, ಕೆ.ಬಿ. ವೆಂಕಟೇಶ್, ಕೆ.ಎಸ್. ಪರಮೇಶ್ವರಯ್ಯ, ಕೆ.ಎಸ್. ಅನಂತಸ್ವಾಮಿ ಇದ್ದರು.
Published on
ಕಿಕ್ಕೇರಿ: ಪಟ್ಟಣದ ಸುಬ್ಬರಾಯ ಛತ್ರದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿ ಭಾನುವಾರ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚನ್ನರಾಯಪಟ್ಟಣ ವಿಪ್ರ ನೌಕರ ಸಂಘ ಅಧ್ಯಕ್ಷ ಎಚ್.ಎಂ. ಶ್ರೀಕಂಠ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು. ಉತ್ತಮವಾಗಿ ವ್ಯಾಸಾಂಗ ಮಾಡಿದ್ದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಸಹಾಯಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಅಲ್ಲದೆ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.
ಕೇಶವ ನೇತ್ರಾಲಯದಿಂದ ನೇತ್ರ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮಾನಸ ಗಂಗೋತ್ರಿ ನಿವೃತ್ತ ಪ್ರಾಧ್ಯಾಪಕ ಕೃಷ್ಣಮೂರ್ತಿ, ಶತಾಯುಷಿ ಕಿಕ್ಕೇರಿ ನಾಗಪ್ಪ, ಕಿಕ್ಕೇರಿ ಸಮಿತಿಯ ಕೆ.ಎಸ್.ಚಂದ್ರಶೇಖರಯ್ಯ, ಕೆ.ಬಿ. ವೆಂಕಟೇಶ್, ಮಹಬಲ ಶರ್ಮ, ಕೆ.ಎಸ್.ಪರಮೇಶ್ವರಯ್ಯ, ಮಧುಶರ್ಮ, ನಾಗರಾಜು ಭಾರ್ಗವ್, ಉಮಾ, ರೇಖಾ, ಶೈಲಾ ಭಾರ್ಗವ್, ಕೆ.ಎಸ್. ಅನಂತಸ್ವಾಮಿ, ಸುರಭಿಶರ್ಮ, ಶ್ರೀಹರಿ, ಸೀತಾರಾಮ್, ನಾಗೇಂದ್ರ, ಕೆ.ಎಸ್. ಪ್ರಭಾಕರ್, ಡಾ.ವಾಸುದೇವು, ಇಸ್ರೋ ಆಕಾಶ್ ಬಾಲಕೃಷ್ಣ, ಎ.ಎಸ್.ವೆಂಕಟರಮಣ, ನಾಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net