ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತರನ್ನು ಕಿಕ್ಕೇರಿ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್‌ನಿಂದ ಅಭಿನಂದಿಸಲಾಯಿತು. ಕೋಡಿಮಾರನಹಳ್ಳಿ ಕೃಷ್ಣೇಗೌಡ, ಜಯರಾಮು, ಎಸ್.ರವಿ, ಕೆ.ಪಿ.ಉಮೇಶ್, ಲಿಂಗರಾಜೇಗೌಡ, ಎಸ್‌ಟಿಡಿ ರಮೇಶ್, ರಂಗಶೆಟ್ಟಿ, ಸೀತಾರಾಮು, ದೇವರಾಜು, ಚಿಕ್ಕೇಗೌಡ ಇದ್ದರು.

Published on
ಕಿಕ್ಕೇರಿ: ಇಲ್ಲಿನ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಿಕ್ಕೇರಿ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎನ್.ಜಯರಾಮು ಮಾತನಾಡಿ, ಕ್ಲಬ್ ಕೇವಲ ಮನರಂಜನೆಗೆ ಮೀಸಲಾಗದೆ ಸಮಾಜಮುಖಿ ಕೆಲಸವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಬಡಮಕ್ಕಳಿಗೆ ಓದುವ ಹಂಬಲವಿದೆ. ಹೆಚ್ಚು ಅಂಕ ಗಳಿಸುವುದು ದೊಡ್ಡ ಸಾಧನೆ. ಯಾವುದೇ ಪರಿಕರಗಳಿಲ್ಲದೆ ಹೆಚ್ಚು ಅಂಕ ಗಳಿಸುವ ಈ ಮಕ್ಕಳ ಸಾಧನೆಗೆ ಆಸರೆಯಾಗಬೇಕಿರುವುದು ಸಮುದಾಯದ ಕರ್ತವ್ಯ ಎಂದು ಹೇಳಿದರು.
ಕ್ಲಬ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು. ನಿವೃತ್ತ ಶಿಕ್ಷಕ ರಂಗಶೆಟ್ಟಿ ಹಾಗೂ ವಿದ್ಯಾರ್ಥಿಗಳಾದ ದೀಕ್ಷಿತಾ, ಲೋಹಿತ, ಸಹನಾ, ಲಕ್ಷ್ಮೀ ಭಜಂತ್ರಿ, ಆಲಿಯಾ, ದೀಕ್ಷಾ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಕೃಷ್ಣೇಗೌಡ, ಜಯರಾಮು, ಎಸ್.ರವಿ, ಕೆ.ಪಿ.ಉಮೇಶ್, ನೀಲಕಂಠಯ್ಯ, ಲಿಂಗರಾಜೇಗೌಡ, ಬಾಲಚಂದ್ರ, ಎಸ್‌ಟಿಡಿ ರಮೇಶ್, ರಂಗಶೆಟ್ಟಿ, ಸೀತಾರಾಮು, ಮಣೀಶ್, ಕಾಯಿ ಮಂಜೇಗೌಡ, ದೇವರಾಜು, ಚಿಕ್ಕೇಗೌಡ, ಮುಕುಂದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net