ಯಾವ ವೃತ್ತಿಯಾದರೂ ತೃಪ್ತಿ ಇರಲಿ: ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅಭಿಮತ

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವೈದ್ಯರ ದಿನಾಚರಣೆ
  • ಅನನ್ಯ ಹಾರ್ಟ್ ಸಂಸ್ಥೆ, ಮಾಂಡವ್ಯ ರೋಟರಿ ಸಂಸ್ಥೆಯಿಂದ ಆಯೋಜನೆ
ಮಂಡ್ಯ: ಯಾವ ವೃತ್ತಿಯನ್ನೂ ಕಡಿಮೆ ಎಂದು ಭಾವಿಸಬಾರದು. ಯಾವ ವೃತ್ತಿಯಾದರೂ ಸರಿ ತೃಪ್ತಿಪಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಬಾರಾಣಿ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಮೀಪದ ಸಭಾಂಗಣದಲ್ಲಿ ಅನನ್ಯ ಹಾರ್ಟ್ ಸಂಸ್ಥೆ, ಮಾಂಡವ್ಯ ರೋಟರಿ ಸಂಸ್ಥೆಯಿಂದ ವೈದ್ಯರ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾನು ದಂತ ವೈದ್ಯೆಯಾದರೂ ಐಪಿಎಸ್ ಉತ್ತೀರ್ಣರಾಗಿ ಪೊಲೀಸ್ ಅಧಿಕಾರಿಯಾಗಿದ್ದೇನೆ. ನಾಲ್ಕು ಗೋಡೆ ಮಧ್ಯೆ ಕುಳಿತು ಕೆಲಸ ಮಾಡುವುದು ಕಷ್ಟ ಎನ್ನಿಸಿತು. ಈ ಕಾರಣದಿಂದ ವೈದ್ಯೆ ವೃತ್ತಿ ಮುಂದುವರಿಸಲಿಲ್ಲ. ಯಾವ ವೃತ್ತಿಯನ್ನೂ ಕಡಿಮೆ ಎಂದು ಭಾವಿಸಿಲ್ಲ. ಪರಿವರ್ತನೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪೊಲೀಸ್ ಇಲಾಖೆಗೆ ಬಂದೆ ಎಂದರು.
ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ಭಾರತದ ಪ್ರಸಿದ್ಧ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರ ಜನ್ಮ ಹಾಗೂ ಮರಣದ ನೆನಪಿನ ದಿನವನ್ನು ವೈದ್ಯ ದಿನವಾಗಿ ಆಚರಿಸಲಾಗುತ್ತಿದೆ. ಅನಾರೋಗ್ಯ ಪೀಡಿತರಿಗೆ ಮರುಜೀವ ನೀಡುವ ವೈದ್ಯರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಆರೋಗ್ಯ ರಕ್ಷಣೆಯು ವ್ಯವಸ್ಥೆ ಮತ್ತು ಮೂಲಸೌಕರ್ಯ ಮಾತ್ರವಲ್ಲದೆ ವೈದ್ಯರ ಬದ್ಧತೆ, ತೀರ್ಪು ಮತ್ತು ಸಹಿಷ್ಣುತೆಯ ಮೇಲೆಯೂ ಅವಲಂಬಿತವಾಗಿದೆ.
2026ರ ರಾಷ್ಟ್ರೀಯ ವೈದ್ಯರ ದಿನದ ಪ್ರಸ್ತುತ ಆಸ್ಪತ್ರೆ ಮತ್ತು ಮಾಧ್ಯಮ ವರದಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸಲಾದ ವಿಷಯವೆಂದರೆ ಮುಖವಾಡದ ಹಿಂದೆ: ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ?. ಈ ವಿಷಯವು ವೈದ್ಯರ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಗಮನ ಸೆಳೆಯುತ್ತದೆ ಎಂದು ನುಡಿದರು.
ಮೈಸೂರು ಡಿಎಚ್‌ಒ ಡಾ.ಕೆ.ಮೋಹನ್, ಮಂಡ್ಯ ಡಿಎಚ್‌ಒ ಡಾ.ಜಿ.ಸಿ.ಬೆಟ್ಟಸ್ವಾಮಿ, ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ತಂಬಾಕು ನಿಯಂತ್ರಣ ಕೋಶದ ತಿಮ್ಮರಾಜು, ಮಾಂಡವ್ಯ ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ, ಲೋಹಿತ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net