ಕಿಕ್ಕೇರಿ: .ಕಿಕ್ಕೇರಿ-ಲಕ್ಷ್ಮೀಪುರ ಜೋಡಿ ಗ್ರಾಮದ ಗ್ರಾಮದೇವಿ ಕಿಕ್ಕೇರಮ್ಮನವರಿಗೆ ಆಷಾಢಮಾಸದ ಪೂಜೆ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿತು..ಭಕ್ತರು ಮುಂಜಾನೆಯಿಂದಲೇ ವಿವಿಧ ಶಕ್ತಿ ದೇಗುಲಗಳಿಗೆ ತೆರಳಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನಿಂಬೆ ಹಣ್ಣಿನ ಆರತಿ, ತುಪ್ಪದ, ಬೆಲ್ಲದ ಆರತಿ ಬೆಳಗಿದರು..ಆಷಾಢ ಮಾಸದ ಕೊನೆಯ ಶುಕ್ರವಾರ ಆದ ಸಲುವಾಗಿ ಪಾರ್ವತಿ ದೇಗುಲ, ಚಿಕ್ಕಳಮ್ಮ, ಕೋಡಿ ಮಾರಮ್ಮ ಮತ್ತಿತರ ದೇಗುಲಗಳಲ್ಲಿ ಭಕ್ತರು ಅಧಿಕವಾಗಿ ಕಂಡು ಬಂದರು.