ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಕಂಸಾಳೆ, ಅಡವಿ ದೇವಿ ಮುಂತಾದ ನೃತ್ಯ, ಕುಡಿತದ ದುಷ್ಪರಿಣಾಮ ಜಾಗೃತಿ ನಾಟಕ ಪ್ರದರ್ಶಿಸಿದರು. ಶಂಬೂನಹಳ್ಳಿ ಆನಂದ್ ಪ್ರಾಯೋಜಿಸಿದ ಸ್ಮರಣಿಕೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಮಕ್ಕಳ ಮನೆ ಶಿಕ್ಷಕಿ ಕವಿತಾ, ಸಹಾಯಕಿ ಸವಿತಾ, ಗ್ರಂಥಪಾಲಕಿ ಗುಣವತಿ, ಶಿಬಿರದ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಘು ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ದೇವಾಲಯದ ಕಾರ್ಯನಿರ್ವಾಹ ಅಧಿಕಾರಿ ಶೀಲಾ ಅವರು ಮಕ್ಕಳಿಗೆ ಲೇಖನ ಸಾಮಗ್ರಿ ಕೊಡುಗೆ ನೀಡಿದರು. ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಯರಾಮೇಗೌಡ, ಪಿಡಿಒ ರಾಜೇಶ್ವರ್, ಸದಸ್ಯೆ ಮಣಿಮುರುಗನ್, ಕಾಲಭೈರವೇಶ್ವರ ಕಲಾ ತಂಡದ ಜಯಲಕ್ಷ್ಮೀ ಪುಟ್ಟರಾಜು, ಕನಗೋನಹಳ್ಳಿ ಕಾಂತರಾಜು, ಪರಿಸರತಜ್ಞ ಸಂತೋಷ್‌ಕೌಲಗಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರೀತಿ ಮಹದೇವ್, ಪುಟ್ಟಸ್ವಾಮಿ, ಶಿಬಿರದ ನೋಡಲ್ ಅಧಿಕಾರಿ ನಿರ್ಮಲಾ, ಸಹ ನಿರ್ದೇಶಕ ಮನು, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಇದ್ದರು.