ಹೊನ್ನಾಳಮ್ಮ ದೇವಿಗೆ ವಾರ್ಷಿಕ ಪೂಜೆ

ಕಿಕ್ಕೇರಿಯಲ್ಲಿ ಶುಕ್ರವಾರ ಹೊನ್ನಾಳಮ್ಮ ದೇವಿಗೆ ವಿಶೇಷ ವಾರ್ಷಿಕ ಪೂಜೆ ನೆರವೇರಿತು.
ಕಿಕ್ಕೇರಿಯಲ್ಲಿ ಶುಕ್ರವಾರ ಹೊನ್ನಾಳಮ್ಮ ದೇವಿಗೆ ವಿಶೇಷ ವಾರ್ಷಿಕ ಪೂಜೆ ನೆರವೇರಿತು.
Published on
ಕಿಕ್ಕೇರಿ: ಇಲ್ಲಿನ ಹೊನ್ನಾಳಮ್ಮ ದೇಗುಲದಲ್ಲಿ ಹೊನ್ನಾಳಮ್ಮ ದೇವಿಗೆ ಶುಕ್ರವಾರ ವಾರ್ಷಿಕ ವಿಶೇಷ ಪೂಜೆ ನೆವೇರಿತು.
ಮುಂಜಾನೆ ದೇವರಿಗೆ ಗಂಗಾಜಲಾಭಿಷೇಕ, ಪಂಚಾಮೃತಾಭಿಷೇಕ, ವಿವಿಧ ಹೋಮ ಹವನಾದಿ ನಡೆಯಿತು. ಪುಷ್ಪಾಲಂಕಾರ, ವಿವಿಧ ವಸ್ತ್ರ, ಆಭರಣಗಳಿಂದ ದೇವರ ಮೂರ್ತಿಯನನು ಸಿಂಗರಿಸಲಾಗಿತ್ತು. ದೇವರಿಗೆ ಮಹಾಮಂಗಳಾರತಿ ಮಾಡಿಚ ನಂತರ ಭಕ್ತರಿಗೆ ತೀರ್ಥ ಪ್ರಸಾದ, ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ವೇಳೆ ದೇಗುಲ ಪ್ರಧಾನ ಸೇವಕ ಕೆ.ಎಚ್. ಮೋಹನ್‌ಕುಮಾರ್ ಮಾತನಾಡಿ, ನಮ್ಮ ಸಮುದಾಯದ ಕುಲದೇವಿ ಹೊನ್ನಾಳಮ್ಮ ಆಗಿದ್ದು, ಗ್ರಾಮದ ಸುಭಿಕ್ಷತೆ, ಶಾಂತಿ ನೆಮ್ಮದಿಗಾಗಿ ವಾರ್ಷಿಕ ಪೂಜೆ ಹಮ್ಮಿಕೊಳ್ಳಲಾಗಿದೆ. ದೇಗುಲದ ಪ್ರಾಂಗಣದಲ್ಲಿ ವೀರಭದ್ರಸ್ವಾಮಿ, ಲಕ್ಷ್ಮೀದೇವಿ, ದೊಡ್ಡಯ್ಯ, ಚಿಕ್ಕಯ್ಯ, ಹಳದಿರಣ್ಣ ದೇವರ ಮೂರ್ತಿಗಳಿದ್ದು, ಈ ದೇವರು ಗ್ರಾಮ ರಕ್ಷಣೆಗಾಗಿ ಸದಾ ಅಭಯ ನೀಡುತ್ತಿದ್ದಾರೆ. ದೇವರ ಮಹಿಮೆ, ಪವಾಡ ಸಾಕಷ್ಟಿವೆ ಎಂದರು.
ದೇಗುಲ ಪರಂಪರೆ ಉಳಿಯಲು ಭವಿಷ್ಯದ ಮಕ್ಕಳಿಗೆ ಶಿಕ್ಷಣದೊಂದಿಗೆ ಧಾರ್ಮಿಕತೆ, ಆಧ್ಯಾತ್ಮದ ಬಗ್ಗೆಯೂ ತಿಳಿಸಿಕೊಟ್ಟರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.
ಮುಖಂಡರಾದ ರಘು, ರವಿ, ಕುಮಾರ್, ಸೀತಾರಾಮು, ಬಾಬು, ನಾಗರಾಜು, ಮಹೇಶ್, ನಾಗೇಶ್, ದಿನೇಶ್, ರಮೇಶ, ಪೂಜಾರಿ ಚಂದು, ಕೃಷ್ಣ, ರಾಘವೇಂದ್ರ, ತೇಜೇಶ್, ತೀರ್ಥೆಶ, ರಾಕೇಶ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net