ಅಂಬೇಡ್ಕರ್ ಕೊಡುಗೆ ಸರ್ವಕಾಲಕ್ಕೂ ಸ್ಮರಣೀಯ

ಶ್ರೀರಂಗಪಟ್ಟಣದ ಗಂಜಾಂನ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಆರ್.ಆದರ್ಶ, ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯಾ, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಸ್ಪಂದನಾ ಇದ್ದರು.
ಶ್ರೀರಂಗಪಟ್ಟಣದ ಗಂಜಾಂನ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಆರ್.ಆದರ್ಶ, ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯಾ, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಸ್ಪಂದನಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ ಬಣ್ಣನೆ
ಶ್ರೀರಂಗಪಟ್ಟಣ : ಶೋಷಿತ ವರ್ಗಗಳಿಗೆ ಶೈಕ್ಷಣಿಕ ಕ್ರಾಂತಿಯ ಮೂಲಕ ಸಮಾನತೆಯ ನ್ಯಾಯದ ಜತೆಗೆ ತಮ್ಮ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡುವ ದನಿ ಒದಗಿಸಿದ ಧೀಮಂತ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಸರ್ವಕಾಲಕ್ಕೂ ಸ್ಮರಣೀಯ ಎಂದು ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ ತಿಳಿಸಿದರು.
ಪಟ್ಟಣ ಹೊರವಲಯದ ಗಂಜಾಂನ ಚಂದಗಾಲು ರಸ್ತೆಯಲ್ಲಿನ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿ, ಮಾತನಾಡಿದರು.
ವಿಶ್ವದಲ್ಲೇ ಭಾರತ ಸಂವಿಧಾನ ಮಹತ್ತರ ಸ್ಥಾನ ಪಡೆಯುವಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಸರ್ವಕಾಲಕ್ಕೂ ಆದರ್ಶನೀಯ. ಇಂತಹ ಮೇರು ವ್ಯಕ್ತಿತ್ವದ ಮಹಾನಾಯಕ ತನಗಾದ ಯಾವ ನೋವುಗಳನ್ನು ಮನಸ್ಸಿನಲ್ಲಿ ದ್ವೇಷ ಸಾಧನೆಗೊ, ಸ್ವಾರ್ಥ ಸಾಧನೆಗೋ ಬಳಸದೆ ತನ್ನಂತೆಯೇ ನೋವು ತಿಂದ, ತಿನ್ನುತ್ತಿದ್ದ ಶೋಷಿತ ವರ್ಗಗಳ ಜನಸಮೂಹಗಳ ಮಕ್ಕಳಿಗೆ ಶಿಕ್ಷಣದ ನೆರವಾಗಲು ಸಂವಿಧಾನವನ್ನು ಮಹಾ ಗ್ರಂಥವನ್ನಾಗಿ ಭಾರತೀಯರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಅನುಸರಿಸಿದ ನೀತಿ ನಿಯಮಗಳು ಸರ್ವರಿಗೂ ಆದರ್ಶವಾಗಿರಬೇಕು. ಭಾರತೀಯರೆಲ್ಲರೂ ಶಿಕ್ಷಣ ಪಡೆಯಬೇಕು. ಸಮಾನತೆ, ಸೌಹಾರ್ದತೆ ಹಾಗೂ ಸಹಕಾರ ನೀಡುವ ಗುಣ ಎಲ್ಲರಲ್ಲೂ ಮೈಗೂಡಬೇಕು ಎಂಬ ಅವರ ಆಶಯ ಈಡೇರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯಾ, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಸ್ಪಂದನಾ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net