ಅಸ್ಪಶ್ಯತೆ ನಿವಾರಣೆಗಾಗಿ ಶ್ರಮಿಸಿದ ಅಂಬೇಡ್ಕರ್

ತೊರೆಕಾಡನಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು.  ಎ.ಗೋವಿಂದರಾಜ್, ಡಿ.ಎಸ್. ಪ್ರೀತಂ,  ಶಿವಕುಮಾರ್ ಚಲವಾದಿ, ವಸೀಮ್ ಉಲ್ಲಾ ಖಾನ್, ತನುಶ್ರೀ ಎಂ.ಕೆ. ಇತರರಿದ್ದರು.
ತೊರೆಕಾಡನಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು. ಎ.ಗೋವಿಂದರಾಜ್, ಡಿ.ಎಸ್. ಪ್ರೀತಂ, ಶಿವಕುಮಾರ್ ಚಲವಾದಿ, ವಸೀಮ್ ಉಲ್ಲಾ ಖಾನ್, ತನುಶ್ರೀ ಎಂ.ಕೆ. ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಜಗನ್ನಾಥ್ ಅಭಿಪ್ರಾಯ
  • 135ನೇ ಜಯಂತ್ಯುತ್ಸವ
ಹಲಗೂರು: ಸಮೀಪದ ತೊರೆಕಾಡನಹಳ್ಳಿ ಗ್ರಾಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸ್ಥಳೀಯ ಸಮಿತಿ ತೊರೆಕಾಡನಹಳ್ಳಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಿಸಲಾಯಿತು.
ಮೈಸೂರಿನ ಕೀಲು, ಮೂಳೆ ತಜ್ಞ ಹಾಗೂ ಬೋಧಿಸತ್ವ ಆರೋಗ್ಯ ಕೇಂದ್ರ ಆಲನಹಳ್ಳಿಯ ಡಾ.ಜಗನ್ನಾಥ್ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಅಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಹೋರಾಟ ನಡೆಸಿದ್ದರು. ಭಾರತದ ಸಂವಿಧಾನವನ್ನು ರಚಿಸಿ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡರು ಎಂದು ತಿಳಿಸಿದರು.
ಬೆಂಗಳೂರು ಜಲ ಮಂಡಳಿಯ ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜ್ ಮಾತನಾಡಿ, ಈಗಿನ ಕಾಲದಲ್ಲಿ ನಮ್ಮ ಮಕ್ಕಳನ್ನು ಅಥವಾ ಸ್ನೇಹಿತರ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಹೊರದೇಶಕ್ಕೆ ಕಳುಹಿಸಿದರೆ ವಿದ್ಯಾಭ್ಯಾಸದ ನಂತರ ಅವರು ಅಲ್ಲಿಯೇ ಜೀವನ ಕಟ್ಟಿಕೊಂಡು ನೆಲೆಸುತ್ತಾರೆ. ಆದರೆ ಅಂಬೇಡ್ಕರ್ ಅವರು ವಿದೇಶದಲ್ಲಿ ಅಷ್ಟು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದು ನಮ್ಮೆಲ್ಲರ ಜೀವನ ಬೆಳಗುವ ಆಶಾದೀಪವಾಗಿದ್ದಾರೆ. ಈ ದಿನ ಅವರನ್ನು ಸ್ಮರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಂಗವಾಗಿ ಕಾಲನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವಿವಿಧ ರೀತಿಯ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಭಿಯಂತರರಾದ ಡಿ.ಎಸ್. ಪ್ರೀತಂ, ಶಿವಕುಮಾರ್ ಚಲವಾದಿ, ವಸೀಮ್ ಉಲ್ಲಾ ಖಾನ್, ತನುಶ್ರೀ ಎಂ.ಕೆ, ಚೇತನ್ ಜಿ.ಆರ್. ಸಣ್ಣ ಲಕ್ಷ್ಮಣ, ಎಂ ಎಸ್. ಸುನೀಲ್ ಕುಮಾರ್ ,ಬಸವರಾಜ್ ಸಜ್ಜನ್, ಎಂ.ಎಸ್. ಚೇತನ್, ಬಿ.ಕೆ ನರೇಶ್, ಮಹಮ್ಮದ್ ಹನೀಫ್ ಯತ್ನಟ್ಟಿ, ಎನ್. ರಘು, ಕೆ.ಎಸ್. ಕಾರ್ತಿಕ್, ಅನಿಲ್ ಕುಮಾರ್, ಮಧು, ನಾಗರಾಜು, ಜಿ .ಆರ್. ಪಲ್ಲವಿ, ಎನ್. ರಮೇಶ್ ಸೇರಿದಂತೆ ಬೆಂಗಳೂರು ಜಲಮಂಡಳಿ ಪ.ಜಾ./ಪ.ವರ್ಗ. ಕೇಂದ್ರ ಹಾಗೂ ಸ್ಥಳೀಯ ನೌಕರ ಸಂಘ ಹಾಗೂ ಬೆಂಗಳೂರು ಜಲಮಂಡಳಿ ನೌಕರರ ಕೇಂದ್ರ ಹಾಗೂ ಸ್ಥಳೀಯ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net