ಸ್ನೇಹ, ಸೇವೆ ಹೆಚ್ಚಿಸುತ್ತಿರುವ ಅಲಯನ್ಸ್: ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಅಭಿಮತ

ಮಂಡ್ಯದಲ್ಲಿ ಆಯೋಜಿಸಿದ್ದ ಸೇವಾ ಚಟುವಟುಕೆಗಳ ವಾರ್ಷಿಕ ವರದಿ ಮಂಡನೆ ಕಾರ್ಯಕ್ರಮವನ್ನು ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸೇವಾ ಚಟುವಟುಕೆಗಳ ವಾರ್ಷಿಕ ವರದಿ ಮಂಡನೆ ಕಾರ್ಯಕ್ರಮವನ್ನು ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಲಯನ್ಸ್‌ ಕ್ಲಬ್ ವಾರ್ಷಿಕ ವರದಿ ಮಂಡನೆ
  • ಬಂದೀಗೌಡ ಬಡಾವಣೆಯಲ್ಲಿನ ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮೂಲಕ ಸೇವೆ ಮತ್ತು ಸ್ನೇಹ ಹೆಚ್ಚಾಗುತ್ತಿದೆ ಎಂದು ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಹೇಳಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿನ ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ, ಅಮೃತ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಮತ್ತು ಸೇವಾ ಚಟುವಟುಕೆಗಳ ವಾರ್ಷಿಕ ವರದಿ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಅಲಯನ್ಸ್ ಸಂಸ್ಥೆ ವಿಶ್ವಮಟ್ಟದಲ್ಲಿ ಉತ್ತಮ ನಾಗರಿಕ ಸೇವೆ ನೀಡಿ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಸೊಗಡಿನ ಮಂಡ್ಯ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಜನ ಸಂಸ್ಥೆಗೆ ಸದಸ್ಯರಾಗಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸಂಸ್ಥೆಯ ಧ್ಯೇಯ ಕ್ಯಾನ್ಸರ್ ಮುಕ್ತ ಪ್ರಪಂಚ ಮಾಡುವುದು ಮತ್ತು ಅಗತ್ಯಯುಳ್ಳ ವಯೋವೃದ್ದರಿಗೆ ಆಶ್ರಯ ನೀಡುವುದು. ಆರೋಗ್ಯ, ಪರಿಸರ ಕಾಳಜಿ ಹೆಚ್ಚಿಸುವುದಾಗಿದೆ ಎಂದು ತಿಳಿಸಿದರು.
ವಲಯಾಧ್ಯಕ್ಷ ಪ್ರೊ.ಬಿ.ಎಸ್.ಶಿವಕುಮಾರ್ ಮಾತನಾಡಿ, ಅಲಯನ್ಸ್ ಸಂಸ್ಥೆಯ ಉದ್ದೇಶ ಸೇವಾ ಮನೋಭಾವದಿಂದ ಸಮಾಜ ಕಟ್ಟುವುದು, ನಾಯಕತ್ವ ಗುಣ ಹೆಚ್ಚಿಸುವುದಾಗಿದೆ. ನಾವು ದುಡಿದ ಹಣದಲ್ಲಿ ಅಲ್ಪಮಟ್ಟಿಗಾದರೂ ಸಮಾಜದ ಉದ್ಧಾರಕ್ಕೆ ಸಮಯ ಮತ್ತು ಸಮರ್ಪಣೆ ಮಾಡುವುದು. ತೃಪ್ತಿಭಾವಕ್ಕಾಗಿ ಅಗತ್ಯಯುಳ್ಳುವರಿಗೆ ನೆರವಾಗುವುದು ನಮ್ಮ ಧ್ಯೇಯವಾಗಿದೆ. ಅಲಯನ್ಸ್ ಸಂಸ್ಥೆಗಳು ಉತ್ತಮ ಸೇವಾ ಚಟುವಟಿಕೆಗಳ ಮೂಲಕ ವಿವಿಧೆಡೆ ಕಾರ್ಯಕ್ರಮ ಮಾಡಿ ಸಮಾಜಕ್ಕೆ ನೆರವಾಗಿರುವ ವರದಿ ಅರ್ಪಣೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಕ್ರಮ ಮಾಡಲಾಗುವುದು ಎಂದರು.
ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಶಿಕ್ಷಕ ಕೆ.ಆರ್.ಶಶಿಧರ್ ಈಚಗೆರೆ, ಸಂಪುಟ ಕಾರ್ಯದರ್ಶಿ ನಾಗರಾಜು, ಖಜಾಂಚಿ ಆರ್.ಮಹೇಶ್, ಆರ್.ಸಿ.ನಾಗರಾಜು, ಕಾರ್ಯದರ್ಶಿ ಎಂ.ಕೆ.ಜಗದೀಶ್, ಎಂ.ಲೋಕೇಶ್, ಪ್ರಮೀಳಾಕುಮಾರಿ, ಭಾಗ್ಯಾ, ಪ್ರೊ.ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net