ಗೊಲ್ಲರಹಳ್ಳಿಯಲ್ಲಿ ಅಗ್ನಿ ಬನ್ನಿರಾಯ ಜಯಂತಿ

ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಆಚರಣೆ ಮಾಡಲಾಯಿತು. ನಾಗರಾಜು, ಮಾದೇಗೌಡ, ಡಿ.ವೆಂಕಟೇಶ, ಹೊನ್ನೇಗೌಡ, ಚಿಕ್ಕ ರಾಜು, ತಮ್ಮಣ್ಣ ಇದ್ದರು.
ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಆಚರಣೆ ಮಾಡಲಾಯಿತು. ನಾಗರಾಜು, ಮಾದೇಗೌಡ, ಡಿ.ವೆಂಕಟೇಶ, ಹೊನ್ನೇಗೌಡ, ಚಿಕ್ಕ ರಾಜು, ತಮ್ಮಣ್ಣ ಇದ್ದರು.
Published on
ಹಲಗೂರು: ಗೊಲ್ಲರಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಅಗ್ನಿವಂಶ ಕ್ಷತ್ರಿಯ ತಿಗಳರ ಜನಾಂಗದಿಂದ ಭಕ್ತಿಭಾವ ಪೂರಕವಾಗಿ ಆಚರಿಸಲಾಯಿತು.
ಶನಿವಾರ ಬೆಳಗ್ಗೆ ಅಗ್ನಿ ಶ್ರೀ ಬನ್ನಿರಾಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಮಾಲೆ ಅರ್ಪಿಸಿದ ನಂತರ, ಮಡಳ್ಳಿ ಗ್ರಾಮದ ನಾಗರಾಜು ಮಾತನಾಡಿ, ಪ್ರಥಮ ಬಾರಿಗೆ ನಮ್ಮ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ನಮ್ಮ ಗ್ರಾಮದಲ್ಲೇ ಆಚರಿಸುವುದಾಗಿ ತಿಳಿಸಿದರು.
ಯುವ ಮುಖಂಡ ಮಂಜು ಮಾತನಾಡಿ, ಅಗ್ನಿ ಬನ್ನಿರಾಯಸ್ವಾಮಿ ನಮ್ಮ ಕುಲದ ಮೂಲಪುರುಷ, ಕೃಷಿ, ತೋಟಗಾರಿಕೆ ನಮ್ಮ ಮೂಲಕಸುಬು. ನಮ್ಮ ಈ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲೇ ಆಚರಿಸಲಾಗುತ್ತಿತ್ತು. ಗ್ರಾಮಸ್ಥರ ಜತೆ ಚರ್ಚಿಸಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಆಚರಿಸಲು ಚರ್ಚಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಮಳವಳ್ಳಿ ಮತ್ತು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ನಾವೆಲ್ಲರೂ ಭಾಗವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಮಾದೇಗೌಡ, ಡಿ.ವೆಂಕಟೇಶ, ಹೊನ್ನೇಗೌಡ, ಚಿಕ್ಕ ರಾಜು, ತಮ್ಮಣ್ಣ, ನಂಜಾಪುರ, ಗೊಲ್ಲರಹಳ್ಳಿ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net