ಸಂಸ್ಕೃತಿಯ ಪ್ರತೀಕವಾಗಿರುವ ಉತ್ಸವ: ಲೇಖಕ ಕೊತ್ತತ್ತಿ ರಾಜು ಅಭಿಮತ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಎಲ್.ರಮ್ಯಾ, ಪಿ.ಲಂಕೇಶ್ ಹಾಗೂ ಬಿ.ಜೆ.ಸೋಮಶೇಖರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಎಲ್.ರಮ್ಯಾ, ಪಿ.ಲಂಕೇಶ್ ಹಾಗೂ ಬಿ.ಜೆ.ಸೋಮಶೇಖರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿಭವನದಲ್ಲಿ ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ
  • ಸಾಧಕರಿಗೆ ಅಗಮ್ಯರತ್ನ ಪ್ರಶಸ್ತಿ ಪ್ರದಾನ
ಮಂಡ್ಯ: ಉತ್ಸವಗಳು ನೆಲ ಬೇರಿನ ಸಂಸ್ಕೃತಿಯ ಪ್ರತೀಕ ಎಂದು ಲೇಖಕ ಕೊತ್ತತ್ತಿ ರಾಜು ತಿಳಿಸಿದರು.
ನಗರದ ಗಾಂಧಿಭವನದಲ್ಲಿ ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಹಾಗೂ ಅಗಮ್ಯ ಕಿಡ್ಸ್ ಕಾರ್ನರ್ ವತಿಯಿಂದ ಆಯೋಜಿಸಿದ್ದ ಅಗಮ್ಯ ಉತ್ಸವ-11 ಹಾಗೂ ಅಗಮ್ಯರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ತಮಾನದಲ್ಲಿ ಘಟಿಸುವ ಆವಿಷ್ಕಾರಗಳು ಮತ್ತು ಬದಲಾವಣೆಗಳು ಸಂಸ್ಕ್ರತಿಯನ್ನು ಆಧಾರಿಸಿರುತ್ತವೆ ಎಂದು ಹೇಳಿದರು.
ಸಮಾಜದಲ್ಲಿ ಬದಲಾವಣೆ ತರುವ ಪ್ರತಿ ಅಂಶವು ಸಂಸ್ಕೃತಿಯಲ್ಲಿಯೂ ಬದಲಾವಣೆ ತರುತ್ತದೆ. ಪ್ರಶಸ್ತಿಯೂ ಒಬ್ಬ ವ್ಯಕ್ತಿಯ ಮಹೊನ್ನತ ಸೇವೆಗೆ ಸಿಗುವ ಗೌರವ. ಮತ್ತು ಸಾಧಕನ ಜವಾಬ್ದಾರಿಯನ್ನು ಹೆಚ್ಚಿಸುವ ಸಂಬಂಧ ಹೊಂದಿದೆ. ಸಾಧಕರು ವರ್ತಮಾನದಲ್ಲಿ ಜೀವಿಸುತ್ತಾ ಇತಿಹಾಸದಲ್ಲಿ ದಾಖಲಾಗಿ ಉಳಿಯುತ್ತಾರೆ ಎಂದರು.
ಅಗಮ್ಯ ಕಿಡ್ಸ್ ಕಾರ್ನರ್ ಅಧ್ಯಕ್ಷ ಬಿ.ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಆರ್.ಗೀತಾ ಇತರರಿದ್ದರು.
ಇದೇ ವೇಳೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಎಲ್.ರಮ್ಯಾ, ನೆಲದನಿ ಬಳಗದ ಅಧ್ಯಕ್ಷ ಮಂಗಲ ಪಿ.ಲಂಕೇಶ್ ಹಾಗೂ ಪತ್ರಕರ್ತ ಬಿ.ಜೆ.ಸೋಮಶೇಖರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಗಮ್ಯ ಕಿಡ್ಸ್ ಕಾರ್ನರ್ ಮಕ್ಕಳು ನಿರರ್ಗಳವಾಗಿ ಭಗವದ್ಗೀತೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net