ಜಿಟಿಟಿಸಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ: ಪ್ರಾಂಶುಪಾಲ ಡಾ.ಕೆ.ಮದನ್ ಮಾಹಿತಿ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಪ್ರಾಂಶುಪಾಲ ಡಾ.ಕೆ.ಮದನ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಪ್ರಾಂಶುಪಾಲ ಡಾ.ಕೆ.ಮದನ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮದ್ದೂರು ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
  • 10ನೇ ತರಗತಿ ಉತ್ತೀರ್ಣರಾದವರಿಗೆ ಮೂರು ವರ್ಷ ತರಬೇತಿ
ಮಂಡ್ಯ: ಮದ್ದೂರು ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ(ಜಿಟಿಟಿಸಿ) ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಡಾ.ಕೆ.ಮದನ್ ತಿಳಿಸಿದರು.
ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ ಎಂಬ ಒಂದು ಕೋರ್ಸ್‌ನಿಂದ ಆರಂಭವಾದ ಜಿಟಿಟಿಸಿ ಕೇಂದ್ರದಲ್ಲಿ ಇದೀಗ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಇನ್ ಆಟೋಮೇಷನ್ ಆ್ಯಂಡ್ ರೋಬೋಟಿಕ್ಸ್ ಕೋರ್ಸ್ ಪ್ರಾರಂಭಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
10ನೇ ತರಗತಿ ಉತ್ತೀರ್ಣರಾದವರಿಗೆ ಮೂರು ವರ್ಷ ತರಬೇತಿ ಹಾಗೂ ಒಂದು ವರ್ಷ ಉದ್ಯೋಗ ತರಬೇತಿ ಇರಲಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಮತ್ತು ಐಟಿಐ ಉತ್ತೀರ್ಣರಾದವರು ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು. ಪ್ರವೇಶವನ್ನು 70:30ರ ಅನುಪಾತದಲ್ಲಿ ಮಾಡಲಾಗುತ್ತಿದ್ದು, ಶೇ.30ರಷ್ಟು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ. ಕಾಲೇಜು, ಬಸ್ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಾಗಿದ್ದು, ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಕಾಲೇಜಿಗೆ ಸಮೀಪದಲ್ಲಿಯೇ ಎರಡು ಬಿಸಿಎಂ ವಿದ್ಯಾರ್ಥಿನಿಲಯ ಹಾಗೂ ಮದ್ದೂರು ಬಸ್ ನಿಲ್ದಾಣದಲ್ಲಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿ ನಿಲಯಗಳಿವೆ. ಇದು ದೂರದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಕಾಲೇಜಿನ ಉದ್ಯೋಗಾಧಿಕಾರಿ ವಿ.ಕೆ.ನರೇಂದ್ರಬಾಬು, ಉಪನ್ಯಾಸಕರಾದ ಎ.ಎಸ್.ಸಿದ್ದಾರ್ಥ್, ಶರತ್‌ರಾಜೇ ಅರಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net