ರೈತ ಕುಟುಂಬಕ್ಕೆ ವಿನೋದ್‌ರಾಜ್ ಸಾಂತ್ವಾನ: ಬಿ.ಹಟ್ನ ಗ್ರಾಮಕ್ಕೆ ಭೇಟಿ ನೀಡಿದ ನಟ

ಮಂಡ್ಯ ತಾಲೂಕು ಬಿ.ಹಟ್ನ ಗ್ರಾಮದ ನಟ ವಿನೋದ್‌ರಾಜ್ ಭೇಟಿ ಕೊಟ್ಟು ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಮಂಡ್ಯ ತಾಲೂಕು ಬಿ.ಹಟ್ನ ಗ್ರಾಮದ ನಟ ವಿನೋದ್‌ರಾಜ್ ಭೇಟಿ ಕೊಟ್ಟು ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ದಂಪತಿ

ಮಂಡ್ಯ: ಸಾಲಬಾಧೆಯಿಂದ ಮನನೊಂದು ತಾಲೂಕಿನ ಬಿ.ಹಟ್ನ ಗ್ರಾಮದಲ್ಲಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ನಟ ವಿನೋದ್‌ರಾಜ್ ಭೇಟಿ ಕೊಟ್ಟು ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಕುಟುಂಬದವರನ್ನು ಕಳೆದುಕೊಂಡಾಗ ಆಗುವ ನೋವು ಎಷ್ಟು ದೊಡ್ಡದು ಎಂಬುದು ನನಗೆ ಗೊತ್ತಿದೆ. ನನ್ನ ತಾಯಿಯನ್ನು ಕಳೆದುಕೊಂಡ ನಾನು ಆ ನೋವನ್ನು ಅನುಭವಿಸಿದ್ದೇನೆ. ಅಂತಹ ದುಃಖ ಮತ್ತೊಂದು ಕುಟುಂಬಕ್ಕೆ ಬರಬಾರದು ಎಂದು ಭಾವುಕರಾದರು.
ಕೃಷಿ ಎನ್ನುವುದು ಪ್ರಕೃತಿಯ ಮೇಲೆ ಅವಲಂಬಿತವಾದ ವೃತ್ತಿ. ಮಳೆ, ಬೆಳೆ, ಬೆಲೆ ಎಲ್ಲವೂ ನಮ್ಮ ಕೈಯಲ್ಲಿರುವುದಿಲ್ಲ. ಆದರೂ ಸಂಕಷ್ಟ ಬಂದಾಗ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವುದು ಎಂದಿಗೂ ಸರಿಯಲ್ಲ. ಎಷ್ಟೇ ಕಷ್ಟ ಬಂದರೂ ನಿಮ್ಮ ಕುಟುಂಬವನ್ನು ಬಿಟ್ಟು ಹೋಗಬೇಡಿ. ನಿಮ್ಮ ಬಳಿ ಭೂಮಿ ಇದೆ, ಕೃಷಿ ಇದೆ. ಧೃತಿಗೆಡದೆ ಕೃಷಿಯನ್ನು ಮುಂದುವರಿಸಿ ಬದುಕನ್ನು ಕಟ್ಟಿಕೊಳ್ಳಬೇಕು. ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಸಮಾಜ ಹಾಗೂ ಸರ್ಕಾರವೂ ನೆರವಾಗಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.
ಈ ವೇಳೆ ಮುಖಂಡರಾದ ಪಾಂಡವಪುರ ದೀಪು, ಸಮೀರ್, ನಾಗೇಂದ್ರ, ರಾಜೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net