ಶಿವಪುರದ ಪೂರ್ಣಪ್ರಜ್ಞ ಕಾನ್ವೆಂಟ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರನ್ನು ಅಭಿನಂದಿಸಲಾಯಿತು. ಕಸ್ತೂರಿ ಅನಂತೇಗೌಡ, ಅನಂತೇಗೌಡ, ಪ್ರೊ.ಕೃಷ್ಣ, ವಿನಯ್, ವಿಕಾಶ್, ರಾಜೇಂದ್ರಕುಮಾರ್, ನಾರಾಯಣಸ್ವಾಮಿ ಇದ್ದರು.
Published on:
Copied
Follow Us
ಮದ್ದೂರು: ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣ ಅಭಿಪ್ರಾಯಪಟ್ಟರು.
ನಗರದ ಶಿವಪುರದ ಪೂರ್ಣಪ್ರಜ್ಞ ಕಾನ್ವೆಂಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.
ಶಿಕ್ಷಕರು ನವ ಸಮಾಜದ ನಿರ್ಮಾತೃಗಳು, ಪ್ರತಿಯೊಬ್ಬರಿಗೂ ಅಕ್ಷರ ಕಲಿಸಿ, ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಬದುಕು ಕಲ್ಪಿಸಿಕೊಡುವ ಶಿಲ್ಪಿಗಳು ಎಂದು ಎಂದು ಬಣ್ಣಿಸಿದರು.
ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಶಿಕ್ಷಣ ಕಲಿಸುವುದು ಅವರ ಸಾಧನೆಗೆ ಕಾರಣವಾಗಿದೆ ಎಂದರು. ವಿದ್ಯಾರ್ಥಿಗಳು ಪಾಲಕರು, ಗುರು-ಹಿರಿಯರಿಗೆ ಗೌರವ ಕೊಡುವತಹ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ಶಾಲೆಯ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಗ್ಗು ಜಾದುಗಾರ್ ನಡೆಸಿಕೊಟ್ಟ ಮ್ಯಾಜಿಕ್ ಷೋ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಗಮನ ಸೆಳೆಯಿತು.
ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಅನಂತೇಗೌಡ, ಮಂಡ್ಯ ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ವಿಕಾಶ್, ಶಿವಪುರ ಶಾಖೆಯ ವ್ಯವಸ್ಥಾಪಕ ವಿನಯ್, ಉಪನ್ಯಾಸಕ ರಾಜೇಂದ್ರ ಕುಮಾರ್, ಹಿರಿಯ ಶಿಕ್ಷಕ ನಾರಾಯಣಸ್ವಾಮಿ ಇತರರು ಇದ್ದರು.