ಖಾಸಗಿ ಆಸ್ಪತ್ರೆಯಲ್ಲಿ ಮತಾಂತರ: ಆಡಳಿತ ಮಂಡಳಿ ವಿರುದ್ಧ ಬಿಜೆಪಿ ದೂರು

ಮತಾಂತರ ಸಂಬಂಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ಸಲ್ಲಿಸಲು ಮಂಡ್ಯ ನಗರದ ಜಿಲ್ಲಾ ಎಸ್ಪಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿದರು.
ಮತಾಂತರ ಸಂಬಂಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ಸಲ್ಲಿಸಲು ಮಂಡ್ಯ ನಗರದ ಜಿಲ್ಲಾ ಎಸ್ಪಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಯಲ್ಲಿ ಮತಾಂತರ
  • ರೋಗಿಗಳಿಗೆ ವಿವಿಧ ರೀತಿಯ ಆಮಿಷ
  • ಬಿಜೆಪಿಯಿಂದ ಜಿಲ್ಲಾ ಎಸ್ಪಿಗೆ ದೂರು
ಮಂಡ್ಯ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮಿಷ ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ನಗರದ ಜಿಲ್ಲಾ ಎಸ್ಪಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತಾಂತರದ ಬಗ್ಗೆ ಮಾತನಾಡಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಮತಾಂತರ ಮಾಡಿ ತಮಗೆ ಹಣ ನೀಡುತ್ತೇವೆ. ಜತೆಗೆ ಕೆಲಸವನ್ನು ಖಾಯಂ ಮಾಡುತ್ತೇವೆಂದು ಆಮಿಷ ನೀಡಿರುವ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊಸ ಒಡಂಬಡಿಕೆ ಎನ್ನುವ ಪುಸ್ತಕ ನೀಡಿ, ಹಿಂದೂ ಧರ್ಮದ ದೇವರಿಗಿಂತ ಯೇಸುವೇ ತುಂಬಾ ಪವರ್‌ಫುಲ್. ಆದ್ದರಿಂದ ನಂಬಿ ಮತಾಂತರವಾಗಿ ನಿಮಗೆ ಒಳ್ಳೆಯದು ಆಗುತ್ತದೆ. ಮತ್ತು ನಿಮಗೆ ಹಣವನ್ನು ನೀಡುತ್ತೇವೆಂದು ಬೈನ್ ವಾಶ್ ಮಾಡುವ ಬಗ್ಗೆ ಅನೇಕ ರೋಗಿಗಳು ಮಾಧ್ಯಮಗಳ ಮುಂದೆಯೇ ಹೇಳಿದ್ದಾರೆ. ಹಾಗಾಗಿ, ಆಮಿಷದ ಮತಾಂತರ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಎಂ.ವಸಂತ್‌ಕುಮಾರ್, ಪ್ರಸನ್ನಕುಮಾರ್, ನಂದೀಶ್, ಯೋಗೇಶ್, ಸುನೀಲ್, ಹೊಸಹಳ್ಳಿ ಶಿವು, ನಾಗರಾಜು, ಚಂದ್ರ, ಪ್ರಸನ್ನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net