ಆಕಸ್ಮಿಕ ಬೆಂಕಿಗೆ ಹುಲ್ಲಿನ ಮೆದೆ ನಾಶ

 ಅಗ್ನಿಶಾಮಕ ದಳದ ಸಿಬ್ಬಂದಿ ಹುಲ್ಲಿನ ಬೆಂಕಿ ನಂದಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಹುಲ್ಲಿನ ಬೆಂಕಿ ನಂದಿಸಿದರು.
Published on
ಹಲಗೂರು: ಸಮೀಪದ ಚೆನ್ನೀಪುರ ಗ್ರಾಮದಲ್ಲಿ ಬುಧವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಜನ ವಸತಿ ಪ್ರದೇಶದಲ್ಲಿ ಹಾಕಿದ್ದ ಹುಲ್ಲಿನ ಮೆದೆಯಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ನೆರೆ ಹೊರೆಯವರು ನೀರು ಹಾಕಲು ಯತ್ನಿಸಿದರು. ಬೆಂಕಿಯ ಜ್ವಾಲೆ ಮತ್ತಷ್ಟು ವ್ಯಾಪಿಸಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದರೂ ಅಷ್ಟರಲ್ಲಿ ಹುಲ್ಲಿನ ಮೆದೆ ಭಾಗಶಃ ಬೆಂಕಿಗೆ ಆಹುತಿಯಾಗಿತ್ತು.
ಹಸುಗಳ ಸಾಕಾಣಿಕೆಗಾಗಿ ನಮ್ಮ ಜಮೀನಿನಲ್ಲಿ ಬೆಳೆದ ಹುಲ್ಲಿನ ಜತೆಗೆ ಬೇರೆ ಕಡೆಯಿಂದಲೂ ಹುಲ್ಲು ಖರೀದಿ ಮಾಡಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಹೇಶ್ ಮನವಿ ಮಾಡಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪಿ.ಹೇಮಂತ್ ಕುಮಾರ್, ಸಿಬ್ಬಂದಿ ಅರುಣ್, ರಘುವೀರ್, ಧೀರಜ್, ಸುನೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net