ರವಿ ಜನಾಂಗದವರಿಂದ ಸಮಾಜಕ್ಕೆ ಸೌಹಾರ್ದತೆ ಸಂದೇಶ

ಕೆ.ಆರ್.ಪೇಟೆ ಪಟ್ಟಣದಲ್ಲಿ ಶಿರವಿ ಸಮಾಜದ ವತಿಯಿಂದ ನಿರ್ಮಿಸಿರುವ ಆಯಿಮಾ ಮಂದಿರದ ನೂತನ ಭವನವನ್ನು ಉದ್ಘಾಟನೆ ಹಿನ್ನೆಲೆಯಲ್ಲಿ ಶಿರವಿ ಸಮಾಜದ ಪುರುಷರು ಹಾಗೂ ಹೆಣ್ಣು ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣ ಧರಿಸಿ ಮೆರವಣಿಗೆಯಲ್ಲಿ ಸಾಗಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶಿರವಿ ಸಮಾಜದ ವತಿಯಿಂದ ನಿರ್ಮಿಸಿರುವ ಆಯಿಮಾ ಮಂದಿರದ ನೂತನ ಭವನವನ್ನು ಉದ್ಘಾಟನೆ ಹಿನ್ನೆಲೆಯಲ್ಲಿ ಶಿರವಿ ಸಮಾಜದ ಪುರುಷರು ಹಾಗೂ ಹೆಣ್ಣು ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣ ಧರಿಸಿ ಮೆರವಣಿಗೆಯಲ್ಲಿ ಸಾಗಿದರು.
Published on

ಪರಮಗುರು ದಿವಾನ್ ಮಾಧವ ಸಿಂಗ್ ಜೀ ಹೇಳಿಕೆ

ಕೆ.ಆರ್.ಪೇಟೆ: ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ರಾಜಸ್ಥಾನದ ಶಿರವಿ ಸಮಾಜದ ಬಂಧುಗಳು ಎಲ್ಲ ಜಾತಿ, ವರ್ಗಗಳ ಜನರ ಜತೆ ಒಂದಾಗಿ ಬೆರೆಯುವ ಮೂಲಕ ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಶಿರವಿ ಸಮಾಜದ 19ನೇ ಪರಮಗುರು ದಿವಾನ್ ಮಾಧವ ಸಿಂಗ್ ಜೀ ಹೇಳಿದರು.
ಪಟ್ಟಣದಲ್ಲಿ ಶಿರವಿ ಸಮಾಜದ ವತಿಯಿಂದ ನಿರ್ಮಿಸಿರುವ ಆಯಿಮಾ ಮಂದಿರದ ನೂತನ ಭವನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು ಹಾಗೂ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದೆ. ರಾಜಸ್ಥಾನ ಸಮಾಜದ ಬಂಧುಗಳು ಭಾವೈಕ್ಯತೆಯ ಸಮಾನತೆ ಸಂದೇಶ ಸಾರುವ ಧರ್ಮ ರಥದ ಮೆರವಣಿಗೆಯಲ್ಲಿ ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು, ಕನ್ನಡದ ಶಲ್ಯಗಳನ್ನು ಹೊದ್ದುಕೊಂಡು ತಮ್ಮ ಕನ್ನಡ ಪ್ರೇಮವನ್ನು ಮೆರೆದಿರುವುದಲ್ಲದೆ, ತಮಗೆ ಆಶ್ರಯ ನೀಡಿರುವ ಕನ್ನಡದ ಮಣ್ಣಿನ ಋಣವನ್ನು ತೀರಿಸುವ ದಿಕ್ಕಿನಲ್ಲಿ ಭಾವೈಕ್ಯತೆಯ ಸಂದೇಶವನ್ನು ನಾಡಿಗೆ ನೀಡಿದ್ದಾರೆ ಎಂದರು.
ಶಿರವಿ ಸಮಾಜದವರು ಮೇಲೆ ಕನ್ನಡಿಗರು ಇಟ್ಟಿರುವ ಪ್ರೀತಿ, ಮಮತೆ, ವಿಶ್ವಾಸ, ಬೆಂಬಲ ಹಾಗೂ ಪ್ರೋತ್ಸಾಹವನ್ನು ಕಂಡು ನನಗೆ ಹೃದಯ ತುಂಬಿ ಬಂದಿದೆ. ತಾಲೂಕಿನ ಜನರ ಒಗ್ಗಟ್ಟು ಹಾಗೂ ಸಹಬಾಳ್ವೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ಅನಾರೋಗ್ಯದ ನಡುವೆಯೂ ರಾಜಸ್ಥಾನದಿಂದ ಕೃಷ್ಣರಾಜಪೇಟೆ ತಾಲೂಕಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನನಗೆ ಸಂತೋಷ ಹೆಚ್ಚಾಗಿದೆ ಎಂದು ಹೇಳಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಪಟ್ಟಣದಲ್ಲಿ ತಾಯಿ ಚಾಮುಂಡೇಶ್ವರಿ ತಾಯಿ ಆಯಿಮಾ ದೇವಿಯ ಮಂದಿರವನ್ನು ಭವ್ಯವಾಗಿ ನಿರ್ಮಿಸಿ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಯಿಮಾ ಮಂದಿರದ ಧರ್ಮ ರಥದ ಮೆರವಣಿಗೆಯೊಂದಿಗೆ ರಾಜಸ್ಥಾನ ಸಮಾಜದ ಪುರುಷರು ಹಾಗೂ ಹೆಣ್ಣು ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣ ಧರಿಸಿ, ಬಾಂಗ್ರಾ ನೃತ್ಯವನ್ನು ಪ್ರದರ್ಶಿಸಿ, ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ನೀಡಿದರು.
ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶೀಳನೆರೆ ಅಂಬರೀಷ್, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಆರ್.ಲೋಕೇಶ್, ತಾಲೂಕು ಜೆಡಿಎಸ್ ಮುಖಂಡ ಜಾನಕಿರಾಮ್, ಪಟ್ಟಣ ಠಾಣೆಯ ಹಿಂದಿನ ಆರಕ್ಷಕ ನಿರೀಕ್ಷಕಿ ಸುಮಾರಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net