ಅರ್ಥಪೂರ್ಣವಾಗಿ ನಡೆದ ಕಲಿಕಾ ಹಬ್ಬ

ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಆಯೋಜಿಸಿದ್ದ  ಕಲಿಕಾ ಹಬ್ಬದಲ್ಲಿ  ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Published on
ಮೇಲುಕೋಟೆ: ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕ್ಲಸ್ಟ್‌ರ್ ಮಟ್ಟದ ಶಾಲೆಗಳ ಒಂದರಿಂದ ಐದನೇ ತರಗತಿಯವರೆಗಿನ ಎಫ್‌ಎಲ್‌ಎನ್ ಸಾಮರ್ಥ್ಯ ಕಲಿತ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತಮ್ಮ ಕಲಿಕೆ ದೃಢಪಡಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಮಕ್ಕಳ ಉತ್ತೇಜನಕ್ಕಾಗಿ ಏಳು ಕಲಿಕಾ ವಿಭಾಗದಲ್ಲಿ ಮಕ್ಕಳ ಬುದ್ಧ್ದಿಶಕ್ತಿ ಪರೀಕ್ಷೆಗೆ ಆಕರ್ಷಕ ಸ್ಟಾಲ್‌ಗಳ ಸಂಪನ್ಮೂಲ ಶಿಕ್ಷಕರು ಸಿದ್ಧಪಡಿಸಿದ್ದರು. ಕಥೆ ಹೇಳುವುದು, ಗಟ್ಟಿಓದು, ಪಾಲಕರೊಂದಿಗೆ ಸಂಬಂಧ, ರಸಪ್ರಶ್ನೆ, ಸಂತಸದಾಯಕ ಗಣಿತ, ಪರಿಸರ ಮಹತ್ವದ ವೇಷಭೂಷಣದೊಂದಿಗೆ ಪಾತ್ರಾಭಿನಯ, ಆಹಾರದೊಂದಿಗೆ ಪೌಷ್ಟಿಕಾಂಶ ಬಳಕೆಯ ಬಗ್ಗೆ ಪ್ರತಿ ಕೊಠಡಿಯಲ್ಲಿ ತೆರೆದ ಸ್ಟಾಲ್‌ನಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಬುದ್ಧಿಚತುರತೆ ಪ್ರದರ್ಶಿಸಿದರು.
ಭಾಗವಹಿಸಿದ 100 ಮಕ್ಕಳ ಪೈಕಿ 21 ವಿಜೇತರಿಗೆ ಇಲಾಖೆಯಿಂದ ಬಹುಮಾನಗಳನ್ನು ನೀಡಿದರೆ ಉಳಿದ ಎಲ್ಲ ಮಕ್ಕಳಿಗೆ ಬಾಲಕರ ಶಾಲೆಯ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್ ಸಮಾಧಾನಕರ ಬಹುಮಾನವಾಗಿ ರೈಟಿಂಗ್‌ಪ್ಯಾಡ್ ಕೊಡುಗೆ ನೀಡಿದ್ದರು. ಮಕ್ಕಳಿಗೆ ಕೇಸರಿಬಾತ್‌ನೊಂದಿಗೆ ಮೇಲುಕೋಟೆಯ ವಿಶೇಷ ಪ್ರಸಾದ ಕದಂಬ ಮತ್ತು ಮೊಸರನ್ನದ ಸವಿಯ ಉಣ ಬಡಿಸಲಾಯಿತು. ಸೆಲ್ಫಿತೆಗೆದುಕೊಳ್ಳಲು ಇಲಾಖೆ ಕಾರ್ಯಕ್ರಮಗಳನ್ನು ಬರೆದು ಕಲಿಕಾಹಬ್ಬಕ್ಕೆ ಹೋಗೋಣ ಎಂಬ ಬಸ್‌ಮಾದರಿ ಮತ್ತು ಎಫ್‌ಎಲ್‌ಎನ್ ಟೋಪಿಗಳು ಕ್ಲಷ್ಟರ್‌ನ ಶಿಕ್ಷಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದವು.
ಮೇಲುಕೋಟೆ ಸಿಆರ್‌ಪಿ ಬೆಟ್ಟಸ್ವಾಮಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಂಡವಪುರ ತಾಲೂಕಿನ 14 ಕ್ಲಸ್ಟರ್‌ಗಳಲ್ಲೂ ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ಸಲಹೆಯಂತೆ ಮೂರು ಹಂತಗಳಲ್ಲಿ ಕಲಿಕಾಹಬ್ಬ ನಡೆಸಲಾಗುತ್ತಿದೆ. ಮೇಲುಕೋಟೆ ಮತ್ತು ಜಕ್ಕನಹಳ್ಳಿ ಕ್ಲಸ್ಟರ್‌ನಲ್ಲಿ ಅಚ್ಚುಕಟ್ಟಾಗಿ ಕಲಿಕಾಹಬ್ಬ ಆಯೋಜಿಸಿದ್ದು 20 ಶಾಲೆಗಳ ನೂರಾರು ಮಕ್ಕಳು ಭಾಗವಹಿಸಿದ್ದಾರೆ ಎಂದರು.
ಪದವೀಧರ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ಕಲಿಕಾಹಬ್ಬದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಡಾ.ವೆಂಕಟರಾಮೇಗೌಡ, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್, ಪದವೀಧರ ಶಿಕ್ಷಕರಸಂಘದ ಮಂಡ್ಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಭಾಗವಹಿಸಿದ್ದರು.
ಕಲಿಕಾಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಜಕ್ಕನಹಳ್ಳಿಯ ಮೆಹರಸುಲ್ತಾನ, ಬಳಿಘಟ್ಟ ಮಹಾಲಕ್ಷ್ಮೀ, ಶ್ರುತಿ ಕಳ್ಳಿಮನಿ, ವಿನುತಾ, ಪಗಡೆಕಲ್ಲಹಳ್ಳಿಯ ಮಹೇಶ್, ಮೇಲುಕೋಟೆಯ ಕಾವ್ಯಾ, ಬಿ.ಜಯಂತಿ ಪೂರ್ಣಿಮಾ, ಮಂಜುಳಾ, ಅಮೃತಿಯ ರಾಧಾಮಣಿ, ಶಂಭೂನಹಳ್ಳಿ ಹೇಮಲತಾ, ದೇವರಹಳ್ಳಿಯ ಅಮರನಾಥ್, ನ್ಯಾಮನಹಳ್ಳಿಯ ಜ್ಯೋತಿ, ಕದಲಗೆರೆಯ ಸತ್ಯಭಾಮಾ, ಸಂಗಾಪುರ ಆನಂದ್ ಕ್ರಿಯಾತ್ಮಕ ಚಟುವಟಿಕೆ ಆಯೋಜಿಸುವ ಮೂಲಕ ಕಲಿಕಾ ಸ್ಟಾಲ್‌ಗಳನ್ನು ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net