ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದವನಿಗೆ ಗೂಸಾ

ಹರೀಶ್ ಕಾರು ಹೆದ್ದಾರಿಯಲ್ಲಿ ಪಲ್ಟಿಯಾಗಿರುವುದು.
ಹರೀಶ್ ಕಾರು ಹೆದ್ದಾರಿಯಲ್ಲಿ ಪಲ್ಟಿಯಾಗಿರುವುದು.
Published on

ಮದ್ದೂರು:

ಆರೋಗ್ಯದಲ್ಲಿ ಏರುಪೇರಾಗಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಾಹನ ಸವಾರನಿಗೆ ಸಾರ್ವಜನಿಕರಿಂದ ಗೂಸಾ ನೀಡಿದ ಅಪರೂಪದ ಘಟನೆ ನಗರದಲ್ಲಿ ಭಾನುವಾರ ಜರುಗಿದೆ.

ಚನ್ನಪಟ್ಟಣ ಮೂಲದ ಮಾಕಳಿ ಗ್ರಾಮದ ಹರೀಶ್ ಗೂಸಾ ತಿಂದ ಕಾರು ಚಾಲಕನಾಗಿದ್ದಾನೆ.
ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಟಿ.ವಿ. ವೃತ್ತದ ಹೆದ್ದಾರಿಯಲ್ಲಿ ಕಾರು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಚಾಲಕನನ್ನು ಪ್ರಶ್ನೆ ಮಾಡಿದ ವೇಳೆ ಸಾರ್ವಜನಿಕರು ಹಾಗೂ ಹರೀಶ್ ನಡುವೆ ವಾಗ್ವಾದ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹರೀಶ್‌ಗೆ ಗೂಸಾ ನೀಡಿದ್ದಾರೆ.
ಹರೀಶ್‌ಗೆ 5 ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ, 5 ದಿನಗಳಿಂದ ಮಾತ್ರೆ ತೆಗೆದುಕೊಳ್ಳದೆ, ಮನೆಯವರಿಗೆ ಹೇಳದೆ ಕಾರನ್ನು ತಂದು ಈ ರೀತಿ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಕಾರು ಚಾಲಕನನ್ನ ವಶಕ್ಕೆ ಪಡೆದ ಪೊಲೀಸರು ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹರೀಶ್‌ನನ್ನು ದಾಖಲು ಮಾಡಿದಾಗ ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಜತೆಯೂ ಅನುಚಿತವಾಗಿ ವರ್ತನೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net