ಗೊಲ್ಲರಕೊಪ್ಪಲು ಬಳಿ ಬೋನಿಗೆ ಬಿದ್ದ ಚಿರತೆ

ಕಿಕ್ಕೇರಿ ಹೋಬಳಿ ಗೊಲ್ಲರಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ಬೋನಿಗೆ ಬಿದ್ದಿರುವ ಚಿರತೆ.
ಕಿಕ್ಕೇರಿ ಹೋಬಳಿ ಗೊಲ್ಲರಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ಬೋನಿಗೆ ಬಿದ್ದಿರುವ ಚಿರತೆ.
Published on
ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾನುವಾರ ರಾತ್ರಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಗೊಲ್ಲರಕೊಪ್ಪಲು, ತೆಂಗಿನಘಟ್ಟ, ಗೋವಿಂದನಹಳ್ಳಿ ಸುತ್ತಲ ಪ್ರದೇಶದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಕುರಿ, ಮೇಕೆ, ಕೋಳಿ, ಸಾಕು ನಾಯಿಗಳನ್ನು ತಿಂದು ಹಾಕುತ್ತಿತ್ತು. ಚಿರತೆ ಕಾಟಕ್ಕೆ ರೋಸಿ ಹೋಗಿದ್ದ ರೈತರು ವಲಯ ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗೊಲ್ಲರಕೊಪ್ಪಲು ಗ್ರಾಮದ ದಿನೇಶ್ ಎಂಬುವರ ಜಮೀನು ಬಳಿ ಚಿರತೆ ಸೆರೆಗಾಗಿ ಬೋನು ಇಟ್ಟಿದ್ದರು. ಭಾನುವಾರ ರಾತ್ರಿ ಬೋನಿನಲ್ಲಿದ್ದ ನಾಯಿ ತಿನ್ನಲು ಬಂದ ಚಿರತೆ ಸೆರೆ ಸಿಕ್ಕಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ರವಾನಿಸಿದರು. ಆರೋಗ್ಯ ತಪಾಸಣೆ ಮಾಡಿ ಮೇಲಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ವಲಯ ಅರಣ್ಯಾಧಿಕಾರಿ ವನಿತಾ, ಉಪವಲಯ ಅರಣ್ಯ ಅಧಿಕಾರಿ ಚೇತನ್, ಸಿಬ್ಬಂದಿ ರವಿಕುಮಾರ್, ಶ್ರೀನಿವಾಸ್, ಅಭಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net