ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ

ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಹಾಗೂ ತಿರುಮಲಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ 4ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿರುವ ಗಾಳಿಪಟಗಳು.
ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಹಾಗೂ ತಿರುಮಲಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ 4ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿರುವ ಗಾಳಿಪಟಗಳು.
Published on

ಪ್ರಮುಖ ಮುಖ್ಯಾಂಶಗಳು

  • kites-in-the-sky

ಪಾಂಡವಪುರ:

ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಹಾಗೂ ತಿರುಮಲಾಪುರ ಯುವಕರ ಬಳಗದ ವತಿಯಿಂದ ಪ್ರಥಮ ಏಕಾದಶಿ ಹಬ್ಬದ ಪ್ರಯುಕ್ತ 4ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆ ನಡೆಯಿತು.

ಚಿಕ್ಕಬ್ಯಾಡರಹಳ್ಳಿ ಹಾಗೂ ತಿರುಮಲಾಪುರ ಗ್ರಾಮದ ಹೊರವಲಯದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.
3 ಅಡಿ, 3ರಿಂದ 6 ಅಡಿ, 6 ಅಡಿ ಮೇಲ್ಪಟ್ಟ ಗಾಳಿ ಪಟಗಳಿಗೆ ಮೂರು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. 45 ನಿಮಿಷಗಳ ಕಾಲಾವಕಾಶದಲ್ಲಿ ಪಟಗಳು ಏರಿದ ಎತ್ತರ ಮತ್ತು ಕ್ರಮಿಸಿದ ದೂರವನ್ನು ಆಧರಿಸಿ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಯಿತು.
ಸ್ಪರ್ಧೆಯಲ್ಲಿ ಸ್ಟಾರ್, ಬೋರಂಟಿ, ತಟ್ಟೆ, ಹೃದಯ, ಕನಕ, ಎಂಟು ಮೂಲೆ ಜಂಟಿ, ರಾಕೇಟ್ ಸೇರಿದಂತೆ ಹಲವು ಮಾದರಿಯ ಪಟಗಳು ಹಾರಿ, ನೋಡುಗರ ಕಣ್ಮನ ಸೆಳೆದವು. 12 ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಿದ್ದ ವಿಶೇಷ ಸ್ಪರ್ಧೆಯು ಪ್ರಮುಖ ಆಕರ್ಷಣೆಯಾಗಿತ್ತು.
ವಿಜೇತರ ವಿವಿರ:
3 ಅಡಿ ಎತ್ತರದ ವಿಭಾಗ
ಹಳ್ಳಿಕಾರ್ ತಟ್ಟೆ ತಿಮ್ಮನಕೊಪ್ಪಲು ಪ್ರಥಮ, ಗೌತಮ್ ಅಶೋಕಚಕ್ರ ಚಿಕ್ಕಬ್ಯಾಡರಹಳ್ಳಿ ದ್ವಿತೀಯ, ಬ್ರಹ್ಮೇಶ್ ಚಿಕ್ಕಬ್ಯಾಡರಹಳ್ಳಿ ತೃತೀಯ ಬಹುಮಾನ ಪಡೆದರು.
3ರಿಂದ 6 ಅಡಿ ಎತ್ತರದ ವಿಭಾಗ
ಚಿರು ಗೋಲ್ಡನ್ ತಿರುಮಲಾಪುರ ಪ್ರಥಮ, ದರ್ಶನ್ ಚಿಕ್ಕಬ್ಯಾಡರಹಳ್ಳಿ ಬೋರಂಟಿ ದ್ವಿತೀಯ, ದಿವಾಕರ ಗಂಟೆಪಟ ತೃತೀಯ, ಗುರು ಚಿಕ್ಕಬ್ಯಾಡರಹಳ್ಳಿ ಅವರಿಗೆ ನಾಲ್ಕನೇ ಬಹುಮಾನ ಒಲಿಯಿತು.
6 ಅಡಿ ಮೇಲ್ಪಟ್ಟ ವಿಭಾಗ
ವಾಲಿಬಾಯ್ಸ ಚಿಕ್ಕಬ್ಯಾಡರಹಳ್ಳಿ ಪ್ರಥಮ, ಕನಗನಮರಡಿ ಬೋರಂಟಿ ದ್ವಿತೀಯ, ಚೇತನ್ ಚಿಕ್ಕಾಡೆ ತಟ್ಟೆಪಟ ತೃತೀಯ, ಕಿರಣ್ ಭಗತ್ ನಾಲ್ಕನೇ ಬಹುಮಾನ ಪಡೆದರು.
ಚಿಕ್ಕಮಕ್ಕಳ ವಿಭಾಗ
ಪ್ರಣಿತ್ ತಿರುಮಲಾಪುರ ಪ್ರಥಮ, ಧನ್ವಿತ್‌ರಾಜ್ ಚಿಕ್ಕಬ್ಯಾಡರಹಳ್ಳಿ ದ್ವಿತೀಯ, ಸಾಥ್ವಿಕ್ ಕನಗನಮರಡಿ ತೃತೀಯ, ಧನ್ವತ್‌ರಾಜ್ ಚಿಕ್ಕಬ್ಯಾಡರಹಳ್ಳಿ ನಾಲ್ಕನೇ ಪ್ರಶಸ್ತಿ ವಿಜೇತರಾದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಸಿ.ಎನ್.ಚಂದನ್, ಆಯೋಜಕರಾದ ಶಿವಕುಮಾರ್ (ಟೈಗರ್) ವಿಶ್ವಾಸ್, ಸಿ.ಎನ್.ರಾಮಚಂದ್ರ, ಅಶ್ವಥ, ಗುರುಪ್ರಸಾದ್, ಅಪ್ಪು, ನಿತಿನ್, ನಂಜುಂಡ, ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net