ಕೆರೆಗೆ ನೀರು ತುಂಬಿಸುವ ದಶಕಗಳ ಕನಸು ಸಾಕಾರ

ತಾಲೂಕಿನ ಚೆನ್ನನಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ 4.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುರುವಾರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಮರವೇಗೌಡ, ಸಿ.ಆರ್.ಸುರೇಶ್, ಆಲಗೂಡು ಸಿದ್ದೇಗೌಡ, ಟಿ.ಎಂ.ಹೊಸೂರು ಮಹದೇವು ಇತರರು ಇದ್ದರು.
ತಾಲೂಕಿನ ಚೆನ್ನನಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ 4.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುರುವಾರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಮರವೇಗೌಡ, ಸಿ.ಆರ್.ಸುರೇಶ್, ಆಲಗೂಡು ಸಿದ್ದೇಗೌಡ, ಟಿ.ಎಂ.ಹೊಸೂರು ಮಹದೇವು ಇತರರು ಇದ್ದರು.
Published on
ಶ್ರೀರಂಗಪಟ್ಟಣ: ತಾಲೂಕಿನ ಚೆನ್ನನಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ 4 ದಶಕಗಳ ಕನಸಿನ ಯೋಜನೆಗೆ ಚಾಲನೆ ದೊರೆತಿದ್ದು, 4.5 ಕೋಟಿ ರೂ.ವೆಚ್ಚದ ಈ ಕಾಮಗಾರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುರುವಾರ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಚೆನ್ನನಕೆರೆ ಗ್ರಾಮ ಹೊರವಲಯದ ಕೆರೆ ಬಳಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
40 ವರ್ಷಗಳ ಕಾಲದ ಸುದೀರ್ಘ ಪ್ರಯತ್ನ, ಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲದಿಂದ ಚೆನ್ನನಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ ಕನಸು ನನಸಾಗುತ್ತಿದೆ. ನಮ್ಮ ತಂದೆ ಬಂಡಿಸಿದ್ದೇಗೌಡರ ಕಾಲನಂತರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಚೆನ್ನನಕೆರೆಗೆ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಅವರ ನಂತರ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಚನ್ನನಕೆರೆಗೆ ಆಗಮಿಸಿ ವೀಕ್ಷಣೆ ಮಾಡಿ ಹೋಗಿದ್ದು, ಅಂದಿನಿಂದಲೂ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು ಎಂದರು.
ಈಗ ನನ್ನ ಅವಧಿಯಲ್ಲಿ ಈ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವು ಇಲ್ಲದಂತಹ ಪರಿಸ್ಥಿತಿಯಲ್ಲಿ ಕ್ಷೇತ್ರದ ಎಲೆಚಾಕನಹಳ್ಳಿಯಿಂದ ಸುಮಾರು 7 ಕೆರೆಗೆ ನೀರು ತರುವ ಪ್ರಯತ್ನ ನಡೆಸಿ ಆಲಗೂಡು ಕೆರೆಗೆ ನೀರು ತರಲಾಗಿದೆ. ಅಲ್ಲಿಂದ ಏನೆಲ್ಲ ಪ್ರಯತ್ನ ನಡೆಸಿದರೂ ಚನ್ನನಕೆರೆ ಎತ್ತರ ಪ್ರದೇಶದಲ್ಲಿರುವ ಕಾರಣ ಕೆರೆಗೆ ನೀರು ತುಂಬಿಸುವ ಪ್ರಯತ್ನವೂ ಕೈಗೂಡಿರಲಿಲ್ಲ. ಜಕ್ಕನಹಳ್ಳಿ ಗ್ರಾಮದಿಂದ ಪೈಪ್‌ಲೈನ್ ಕಾಮಗಾರಿ ಮೂಲಕ ನೇರವಾಗಿ ಫ್ರೋ ಇರಿಗೇಷನ್ ಮಾಡಿದ್ದರೂ ಕೆರೆ ತುಂಬಿಸಲಾಗಿರಲಿಲ್ಲ. ಹೀಗಾಗಿ ಇಂದು ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ನಿಗಮದ ಅಧಿಕಾರಿಗಳು, ಇಂಜಿನಿಯರ್‌ಗಳು ವೈಜ್ಞಾನಿಕವಾಗಿ ನೀರು ತುಂಬಿಸುವ ಕಾಮಗಾರಿಯ ಯೋಜನೆ ರೂಪಿಸಿದ್ದು, ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಚೆನ್ನನಕೆರೆ ಗ್ರಾಮದ ಮುಖಂಡರಾದ ಮರವೇಗೌಡ, ಸಿ.ಆರ್.ಸುರೇಶ್, ಆಲಗೂಡು ಸಿದ್ದೇಗೌಡ, ಟಿ.ಎಂ.ಹೊಸೂರು ಮಹದೇವು, ರಾಮಕೃಷ್ಣ, ದೇವೇಗೌಡ, ಅಜಯ್, ರವಿಗೌಡ, ಕಿರಣ್, ಸಯೋಬ್, ಲಿಂಗರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net