ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ನಿವಾಸಿ ದಿ.ದೊಡ್ಡ ಚೌಡಯ್ಯ ಅವರ ಪುತ್ರ ರಘುವೀರ್ ಚಿಕ್ಕ ವಯಸ್ಸಿನಲ್ಲೇ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ರಘುವೀರ್‌ಗೆ ಸುಮಾರು ಮೂರೂವರೆ ಎಕರೆಯಿದ್ದು, ಸುಗಂಧರಾಜ, ಟೊಮ್ಯಾಟೊ, ಹೀರೆಕಾಯಿ, ಕ್ಯಾನ್ಸರ್ ಗುಣಪಡಿಸುವ ಲಕ್ಷ್ಮಿತರು, ಹನುಮಂತಫಲ, ಹಲಸು, ನೇರಳೆ, 18 ಮೇಕೆ, ಒಂದೂವರೆ ಸಾವಿರ ಮೀನು ಸಾಕಣೆ, ಎರೆಹುಳ ಗೊಬ್ಬರ ತಯಾರಿಕೆ, ನೂರು ತೆಂಗಿನ ಸಸಿ, 100 ಗೊಬ್ಬರ ಗಿಡಗಳು, ಜೋಳ, 5 ಎಚ್.ಎಫ್.ಹಸುಗಳು, 1 ಎಮ್ಮೆ ಸೇರಿದಂತೆ ವಿವಿಧ ರೀತಿಯ ಭತ್ತದ ಬೆಳೆಗಳನ್ನು ಬೆಳೆದು ವರ್ಷಕ್ಕೆ ಸುಮಾರು 7 ರಿಂದ 8 ಲಕ್ಷ ರೂ. ಸಂಪಾದಿಸುತ್ತಿದ್ದಾರೆ.