ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಂಗ್ರಹಿಸಿದ ರಕ್ತವನ್ನು ಹಸ್ತಾಂತರಿಸಲಾಯಿತು. ಕವಯತ್ರಿ ಎಚ್.ಆರ್.ಕನ್ನಿಕಾ, ಡಾ.ಐ.ಸಿ.ಆದಿತ್ಯಗೌಡ, ಲಂಕೇಶ್, ಚಂದ್ರಶೇಖರ್, ಧನಂಜಯ್, ರಕ್ಷಿತ್‌ರಾಜ್, ಕೋಮಲ್‌ಕುಮಾರ್, ಮಂಜುನಾಥ್, ಕುಮಾರ್‌ಗೌಡ, ಲೋಕೇಶ್ ಇತರರಿದ್ದರು.
ಮಂಡ್ಯ:ಯುವ ಕವಯತ್ರಿ ಎಚ್.ಆರ್.ಕನ್ನಿಕಾ ಜನ್ಮದಿನದ ಅಂಗವಾಗಿ ಮಂಗಳವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ 20 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ನೆಲದನಿ ಬಳಗ ಮಂಗಲ, ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲೆ, ನೆಲದನಿ ಮತ್ತು ಕೌಶಲ ಅಲಯನ್ಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಮಿಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹಲವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಸ್ಪಂದನ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಐ.ಸಿ.ಆದಿತ್ಯಗೌಡ ಮಾತನಾಡಿ, ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ರಕ್ತ ಸಂಗ್ರಹವಾಗಿರಬೇಕು. ಅಂತೆಯೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪರಿಣಾಮ ಆಕಸ್ಮಿಕ ಸನ್ನಿವೇಶಗಳಲ್ಲಿ ರೋಗಗಳಿಗೆ ಅಥವಾ ಜೀವ ಉಳಿಸುವ ಸಂದರ್ಭಗಳು ಎದುರಾದಾಗ ಪರದಾಡುವುದು ತಪ್ಪುತ್ತದೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್, ಎಚ್.ಆರ್.ಕನ್ನಿಕಾ ಅವರು ಜಿಲ್ಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನವೋದಯ ಶಿಕ್ಷಣಕ್ಕೆ ಪರೀಕ್ಷೆ ಎದುರಿಸುವ ಕೌಶಲ ಜ್ಞಾನ, ತರಬೇತಿ ಶಿಕ್ಷಣ ನೀಡುತ್ತಾ ಅಸಂಖ್ಯಾತ ವಿದ್ಯಾರ್ಥಿಗಳು ನವೋದಯ, ಸೈನಿಕ ಶಾಲಾ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಅವರ ಸಾಧನೆಗೆ ಹಲವು ಪುರಸ್ಕಾರ ಒಲಿದಿವೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ಉಪ ಪ್ರಾಂತಪಾಲ ಚಂದ್ರಶೇಖರ್, ಸಂಪುಟ ಕಾರ್ಯದರ್ಶಿ ಧನಂಜಯ್, ರಕ್ಷಿತ್‌ರಾಜ್, ಹಿರಿಯ ನಾಗರಿಕ ಮತ್ತು ವಿಶೇಷಚೇತನ ಸಬಲೀಕರಣ ಇಲಾಖೆ ಅಧಿಕಾರಿ ಕೋಮಲ್ ಕುಮಾರ್, ಕವಯತ್ರಿ ಎಚ್.ಆರ್.ಕನ್ನಿಕಾ, ಕನ್ನಡ ಸೇನೆ ಮಂಜುನಾಥ್, ಕುಮಾರ್‌ಗೌಡ, ಲೋಕೇಶ್ ಇತರರಿದ್ದರು.